ಚೆನ್ನೈ: ಡಿಎಂಕೆ (DMK) ಸಂಸದೆ ಕನಿಮೊಳಿ (Kanimozhi) ಅವರಿಗೆ ಬಸ್ ಟಿಕೆಟ್ ನೀಡಿದ್ದಕ್ಕೆ ಬೇಸತ್ತು ತಮಿಳುನಾಡಿನ (Tamil Nadu) ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸದೆ ಗಾಂಧಿಪುರಂನಿಂದ ಪೀಲಮೇಡುವಿಗೆ ತೆರಳಲು ಬಸ್ ಏರಿದ್ದರು. ಈ ವೇಳೆ ಕಂಡಕ್ಟರ್ ಟಿಕೆಟ್ ನೀಡಿದ್ದರು. ಇದಕ್ಕೆ ಚಾಲಕಿ ಹಾಗೂ ಕಂಡಕ್ಟರ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಅಲ್ಲದೇ ಚಾಲಕಿ ಶರ್ಮಿಳಾ ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ
Advertisement
ಕನಿಮೋಳಿಯವರು ನಾನು ಓಡಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಲು ಬಂದಿದ್ದರು. ಆದರೆ ಕಂಡಕ್ಟರ್ ಟಿಕೆಟ್ ಖರೀದಿಸುವಂತೆ ಸಂಸದರಿಗೆ ಹೇಳಿದರು. ಇದು ನನ್ನ ಮತ್ತು ಕಂಡಕ್ಟರ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸಂಸದರನ್ನು ಭೇಟಿಯಾದ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ ಸಂಸದರಿಗೆ ಮಾಡಿದ ಅಗೌರವವನ್ನು ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ಸಂಸದರಿಗೆ ಕಂಡಕ್ಟರ್ ಟಿಕೆಟ್ ನೀಡಿರುವುದು ಸರಿಯಾದ ನಡೆಯಲ್ಲ ಎಂದು ಶರ್ಮಿಳಾ ಆರೋಪಿಸಿದ್ದಾರೆ.
Advertisement
ಬಿಜೆಪಿ (BJP) ಶಾಸಕಿ ವನತಿ ಶ್ರೀನಿವಾಸನ್ ಕೂಡ ಈ ಹಿಂದೆ ಶರ್ಮಿಳಾ ಚಲಾಯಿಸುತ್ತಿದ್ದ ಬಸ್‍ನಲ್ಲಿ ಪ್ರಯಾಣಿಸಿದ್ದಾರೆ. ಚಾಲಕಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿವೆ.
Advertisement
Advertisement
ಸಾರಿಗೆ ಸಂಸ್ಥೆಯ ಮುಖ್ಯಸ್ಥ ದುರೈ ಕಣ್ಣನ್ ಅವರು ಕನಿಮೊಳಿಯವರ ಭೇಟಿಯ ಮಾಹಿತಿಯನ್ನು ನಿರಾಕರಿಸಿದ್ದಾರೆ. ನಮಗೆ ತಿಳಿಸಿದ್ದರೆ ನಾವು ಸಂಸದರಿಗೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು. ಅಲ್ಲದೇ ಆಡಳಿತ ಮಂಡಳಿ ಶರ್ಮಿಳಾ ಅವರಿಗೆ ಕೆಲಸ ಬಿಡುವಂತೆ ಬಲವಂತಪಡಿಸಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಈ ಘಟನೆಗೂ ಮೊದಲು ಸಭೆಯೊಂದಕ್ಕೆ ತೆರಳುವ ಮುನ್ನ, ಕನಿಮೊಳಿ ಅವರು ಬಸ್ ಚಾಲಕಿಯಾಗಲು ಶರ್ಮಿಳಾ ಪಟ್ಟಿರುವ ಶ್ರಮವನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?