ಚೆನ್ನೈ: ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನಿಸುತ್ತಿರುವ ಬಿಜೆಪಿ, ಇತ್ತೀಚೆಗೆ ಸಂಗೀತ ಮಾಂತ್ರಿಕ ಇಳಯರಾಜಾರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್‍ರನ್ನು ರಾಜ್ಯಪಾಲರನ್ನಾಗಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಹಿಂದೆ ಹಲವು ಬಾರಿ ರಾಜಕೀಯಕ್ಕೆ ಬರುವ ಸುಳಿವು ಕೊಟ್ಟಿದ್ದ ರಜನಿಕಾಂತ್ ಕಡೆ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮೊನ್ನೆ ಕೆಂಪುಕೋಟೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್, ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವರನ್ನು ಭೇಟಿ ಮಾಡಿದ್ರು. ಇದಕ್ಕೂ ಮುನ್ನ, ತಮಿಳುನಾಡು ರಾಜ್ಯಪಾಲರನ್ನು ರಜನಿಕಾಂತ್ ಭೇಟಿ ಮಾಡಿದ್ದರು. ಇದನ್ನೂ ಓದಿ: ಪರಿಶಿಷ್ಟ ಜಾತಿಗೆ ಸೇರಿದವಳೆಂದು ತಿಳಿದು ಆಕೆ ದೇಹ ಮುಟ್ಟುತ್ತಾನೆಂಬುದು ನಂಬಲಸಾಧ್ಯ: ಕೋರ್ಟ್
Advertisement
Advertisement
ಈ ಭೇಟಿಯಲ್ಲಿ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದರು. ಆದರೆ, ನೇರವಾಗಿ ರಾಜಕೀಯಕ್ಕೆ ರಜನಿಕಾಂತ್ ಬರಲು ಒಪ್ಪದ ಕಾರಣ ಅವರನ್ನು ರಾಜ್ಯಪಾಲರನ್ನಾಗಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದಕ್ಕೆ ರಜನಿಕಾಂತ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ಸಿಗರೇಟ್‍ನಿಂದ ಸುಟ್ಟ ವ್ಯಕ್ತಿಯ ಬಂಧನ