ಮಂಡ್ಯ: ಜಿಲ್ಲೆಯ ಚಿಕ್ಕದೇವರಾಜ ಅರಸು ನಾಲೆ ಸೇರಿದಂತೆ ಕಾವೇರಿ ನದಿ ಪಾತ್ರದ ಕಾಲುವೆಗಳಿಗೆ ನೀರು ಹರಿಸಲು ಹಿಂದೆ ಮುಂದೆ ನೋಡುವ ಸರ್ಕಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾರಂಭಿಸಿದೆ.
ಮಂಗಳವಾರ ರಾತ್ರಿಯಿಂದಲೇ ನದಿಗೆ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳ 5 ಟಿಎಂಸಿ ನೀರು ಹರಿಸಬೇಕಿದ್ದು, ಅದರ ಕೋಟದಂತೆ ನೀರು ಹರಿಸಲಾಗುತ್ತಿದೆ ಎನ್ನಲಾಗಿದೆ.
Advertisement
Advertisement
ಡ್ಯಾಂನಿಂದ ತಮಿಳುನಾಡಿಗೆ 2500 ಕ್ಯೂಸೆಕ್ ನೀರು ಬಿಟ್ಟಿದ್ದು. ಸದ್ಯ ವಿಸಿ ನಾಲೆಗೆ ಹರಿಸುತ್ತಿರುವ ನೀರು ಸೇರಿ ಡ್ಯಾಂನಿಂದ 5885 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
Advertisement
ಅಣೆಕಟ್ಟೆಯ ಪ್ರಸ್ತುತ 112.57 ಅಡಿ ನೀರಿದ್ದು. ಒಳ ಹರಿವು – 227 ಕ್ಯೂಸೆಕ್, ಹೊರ ಹರಿವು – 5885 ಕ್ಯೂಸೆಕ್ ಇದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ನೀರು ಸಾಮರ್ಥ್ಯ ಹೊಂದಿದೆ.