ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ – ಡಿಎಂಕೆ ಜಯಭೇರಿ, ಬಿಜೆಪಿ 3ನೇ ಅತಿದೊಡ್ಡ ಪಕ್ಷ

Public TV
2 Min Read
MK STALIN AND ANNAMALAI

ಚೆನ್ನೈ: ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ 200 ಕ್ಷೇತ್ರಗಳ ಪೈಕಿ 146 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತ ರೂಢ ಡಿಎಂಕೆ ಮೈತ್ರಿಕೂಟ ಅಧಿಪತ್ಯ ಸಾಧಿಸಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಇದೇ ಮೊದಲ ಬಾರಿಗೆ ಹಲವು ಕಡೆ ಖಾತೆಗಳನ್ನು ತೆರೆದಿದ್ದು ಮೂರನೇ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿ ಡಿಎಂಕೆ, ಎಡಿಎಂಕೆ, ಕಾಂಗ್ರೆಸ್‍ಗೆ ಶಾಕ್ ನೀಡಿದೆ.

MK STALIN

ಫೆಬ್ರವರಿ 19 ರಂದು ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್, ಪುರ ಸಭೆ ಮತ್ತು ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್‍ಗಳ ಪೈಕಿ 200 ವಾರ್ಡ್‍ಗಳಲ್ಲಿ ಡಿಎಂಕೆ 146 ಸ್ಥಾನಗಳನ್ನು ಗೆದ್ದುಗೊಂಡಿದೆ. ಇನ್ನುಳಿದಂತೆ ಎಐಡಿಎಂಕೆ 15, ಕಾಂಗ್ರೆಸ್ 13, 5 ಪಕ್ಷೇತರ ಅಭ್ಯರ್ಥಿಗಳು, ಸಿಪಿಐ ಪಕ್ಷ 4, ವಿಸಿಕೆ 3, ಎಮ್‍ಡಿಎಮ್‍ಕೆ 2 ಮತ್ತು ಸಿಪಿಐ, ಐಯುಎಮ್‍ಎಲ್, ಎಎಮ್‍ಎಮ್‍ಕೆ, ಬಿಜೆಪಿ ತಲಾ 1 ಸ್ಥಾನ ಗೆದ್ದುಕೊಂಡಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

ಒಟ್ಟು 138 ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್, 21 ಪುರ ಸಭೆ ವಾರ್ಡ್‍ಗಳು ಮತ್ತು 490 ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆದು ಒಟ್ಟು 57,778 ಅಭ್ಯರ್ಥಿಗಳು 12,607 ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

ಯಾರಿಗೆ ಎಷ್ಟು ಸ್ಥಾನ?
ಕಾರ್ಪೋರೇಷನ್ ವಾರ್ಡ್ ಅಭ್ಯರ್ಥಿಗಳು
ಫಲಿತಾಂಶಗಳು: 1128/1374
ಡಿಎಂಕೆ+ : 879
ಎಐಎಡಿಎಂಕೆ: 140
ಬಿಜೆಪಿ: 16
ಇತರೆ: 93

ಪುರಸಭೆಗಳು
ಫಲಿತಾಂಶಗಳು: 3761/3842
ಡಿಎಂಕೆ+ : 2519
ಎಐಎಡಿಎಂಕೆ: 621
ಬಿಜೆಪಿ: 56
ಡಿಎಂಡಿಕೆ: 12
ಇತರೆ: 553

ಪಟ್ಟಣ ಪಂಚಾಯಿತಿಗಳು:
ಫಲಿತಾಂಶಗಳು: 7601/7621
ಡಿಎಂಕೆ+ : 4882
ಎಐಎಡಿಎಂಕೆ: 1207
ಬಿಜೆಪಿ: 230
ಡಿಎಂಡಿಕೆ: 23
ಇತರೆ: 1259

ಸ್ಥಳೀಯ ಚುನಾವಣಾ ಫಲಿತಾಂಶದ ಬಗ್ಗೆ ಟ್ವಿಟ್ಟರ್ ಮೂಲಕ ಹರ್ಷವ್ಯಕ್ತ ಪಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಬಿಜೆಪಿಗೆ ಇದು ಅಭೂತಪೂರ್ವ ಗೆಲುವು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇರುವ ಅಭಿಮಾನವನ್ನು ಇಂದು ತಮಿಳುನಾಡಿನ ಮಕ್ಕಳು ತೋರಿಸಿದ್ದಾರೆ. ಜನರ ಪ್ರೀತಿಗೆ ನಾವು ಅಭಾರಿಯಾಗಿದ್ದೇವೆ ಎಂದು ಧನ್ಯವಾದ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *