ಚೆನ್ನೈ: ಪ್ರೇಮಿಗಳ ದಿನದಂದು ಶಿಕ್ಷಕನೊಬ್ಬ ಎಂಟನೇ ತರಗತಿಯ ವಿದ್ಯಾರ್ಥಿನಿಗೆ ಗುಲಾಬಿ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿ ಜೈಲು ಸೇರಿರುವ ಘಟನೆ ತಮಿಳುನಾಡಿನ ಚಿನ್ನ ಸೇಲಂ ಜಿಲ್ಲೆ ವಿಲ್ಲುಪುರಂ ನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ವಿಲ್ಲುಪುರಂ ಗ್ರಾಮದ ಸರ್ಕಾರಿ ಅನುದಾನಿತ ಶಾಲೆಯ ಶಿಕ್ಷಕ ನಿರ್ಮಲ್ ಪ್ರೇಮಕುಮಾರ್ (43) ಎಂಟನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಇತರೇ ವಿದ್ಯಾರ್ಥಿಗಳ ಎದುರೇ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಗುಲಾಬಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾಳೆ. ಆದರೆ ಪ್ರೇಮಕುಮಾರ್ ಮಾತ್ರ ಗುಲಾಬಿಯನ್ನು ಪಡೆಯಲು ಬಲವಂತವಾಗಿ ಒತ್ತಡ ಹಾಕಿದ್ದಾನೆ.
Advertisement
Advertisement
ಬಾಲಕಿ ಗುಲಾಬಿ ಪಡೆಯಲು ನಿರಾಕರಿಸಿದಕ್ಕೆ ಪ್ರೇಮ ಕುಮಾರ್ ತಮ್ಮ ಸಹೋದ್ಯೋಗಿ ಶಾಲೆಯ ದೈಹಿಕ ಶಿಕ್ಷಕ ಎಸ್. ಲಾರೆನ್ಸ್ (31) ಸಹಾಯ ಕೇಳಿದ್ದಾನೆ. ಸ್ನೇಹಿತನಿಗೆ ಸಹಾಯ ಮಾಡುವ ಉದ್ದೇಶದಿಂದ ಲಾರೆನ್ಸ್, ಗುಲಾಬಿ ಪಡೆಯದಿದ್ದರೆ ವಿದ್ಯಾಬ್ಯಾಸ ಮುಂದುವರೆಸಲು ತೊಂದರೆಯಾಗುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಶಾಲೆಯಲ್ಲಿ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸದಂತೆ ಎಚ್ಚರಿಸಿದ್ದಾನೆ.
Advertisement
ಶಿಕ್ಷಕರ ಅನುಚಿತ ವರ್ತನೆಯಿಂದ ಬೇಸರಗೊಂಡ ಬಾಲಕಿ ಮನೆಗೆ ಅಳುತ್ತಾ ತೆರಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ಪೋಷಕರು ಈಕೆಯನ್ನು ಸಮಾಧಾನ ಪಡಿಸಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಅನಂತರ ಪೊಲೀಸರಿಗೆ ದೂರು ನೀಡಿ, ಜಿಲ್ಲೆಯ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಇಬ್ಬರು ಶಿಕ್ಷಕರನ್ನು ಸೋಮವಾರ ಅಮಾನತು ಮಾಡಿ ಆದೇಶ ನೀಡಿದ್ದಾರೆ.
Advertisement
ವಿದ್ಯಾರ್ಥಿನಿ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅಂದಹಾಗೇ ಇಬ್ಬರು ಶಿಕ್ಷಕರಿಗೂ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಇದ್ದಾರೆ.