ಚೆನ್ನೈ: ಕೋವಿಡ್‌ನ ರೂಪಾಂತರಿಯಾಗಿರುವ ಓಮಿಕ್ರಾನ್‌ನ BA-4 ಉಪತಳಿ ತಮಿಳುನಾಡಿನಲ್ಲಿ ಪತ್ತೆಯಾಗಿದೆ.
ನಿನ್ನೆ ಹೈದರಾಬಾದ್‌ನಲ್ಲಿ ಮೊದಲ ರೂಪಾಂತರಿ ಪತ್ತೆಯಾಗಿತ್ತು. ಈಗ ಚೆನ್ನೈನಿಂದ 30 ಕಿ.ಮೀ. ದೂರದಲ್ಲಿರುವ ಚೆಂಗಲ್ಪಟ್ಟು ಜಿಲ್ಲೆಯ ನವಲೂರ್ ನಿವಾಸಿಯೊಬ್ಬರಲ್ಲಿ ಬಿಎ-4 2ನೇ ಪ್ರಕರಣ ಪತ್ತೆಯಾಗಿದೆ. ವ್ಯಕ್ತಿಯ ಪ್ರಯಾಣದ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಎಂ.ಸುಬ್ರಹ್ಮಣಿಯನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಯೋಗ ದಿನಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಪ್ರತಾಪ್ ಸಿಂಹ
Advertisement
Advertisement
ಕೋವಿಡ್ ಲಕ್ಷಣಗಳನ್ನೇ ಹೊಂದಿರುವ ಬಿಎ-4 ರೂಪಾಂತರಿಯಿಂದ ಯಾವುದೇ ಆತಂಕ ಇಲ್ಲ. ಆದರೂ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ. ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ
Advertisement
ಮಾಹಿತಿ ಪ್ರಕಾರ, ಮೇ ತಿಂಗಳಲ್ಲಿ ನಡೆದ ಕೋವಿಡ್ ಮಾದರಿ ಪರೀಕ್ಷೆಗಳಲ್ಲಿ ಶೇ.82 ರಷ್ಟು ಓಮಿಕ್ರಾನ್‌ನ BA ರೂಪಾಂತರಿಗಳು ಕಾಣಿಸಿಕೊಂಡಿವೆ. ಶೇ.7 ರಷ್ಟು BA-3 ಹಾಗೂ ಶೇ.10 ರಷ್ಟು BA-2 ರೂಪಾಂತರಿ ಕಾಣಿಸಿಕೊಂಡಿದ್ದು BA-4 2ನೇ ಪ್ರಕರಣ ಕಾಣಿಸಿಕೊಂಡಿದೆ.