ರಾಮೇಶ್ವರದಲ್ಲಿ 5 ಸಾವಿರ ಗುಂಡುಗಳು, ಸ್ಫೋಟಕ ವಸ್ತುಗಳು ಪೊಲೀಸ್ ವಶಕ್ಕೆ

Public TV
1 Min Read
explosives Rameswaram 3

ಚೆನ್ನೈ: ತಮಿಳುನಾಡಿನ ಪೊಲೀಸರು ರಾಮೇಶ್ವರಂ ದ್ವೀಪದಲ್ಲಿನ ಕರಾವಳಿ ಹಳ್ಳಿಗಳಲ್ಲಿ ಸೋಮವಾರ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮೇಶ್ವರಂ ದ್ವೀಪದ ಆಂಥೋನಿಯರ್ಪುರಾಮ್ ನಿವಾಸಿಯೊಬ್ಬರು ಮನೆಯ ಹಿಂಭಾಗದ ಸೆಪ್ಟಿಕ್ ತೊಟ್ಟಿಗಳನ್ನು ನಿರ್ಮಿಸುತ್ತಿರುವಾಗ ಗಂಡುಗಳು ಪತ್ತೆಯಾಗಿದ್ದವು ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಡು ಮತ್ತು ಸ್ಫೋಟಕ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಸದ್ಯ ಪತ್ತೆಯಾಗಿರುವ ಸ್ಫೋಟಕಗಳು 1980 ರಲ್ಲಿ ಎಲ್‍ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಂ) ಉಗ್ರಗಾಮಿ ಸಂಘಟನೆ ಸಂಗ್ರಹಿಸಿದ್ದ ವಸ್ತುಗಳು ಎಂದು ಶಂಕಿಸಲಾಗಿದೆ. ಎಲ್‍ಟಿಟಿಇ ಉಗ್ರಗಾಮಿಗಳು ಶ್ರೀಲಂಕಾದಲ್ಲಿ ತಮಿಳು ಸಮುದಾಯಕ್ಕೆ ಪ್ರತ್ಯೇಕ ಪ್ರದೇಶ ರೂಪಿಸಲು ಹೋರಾಟ ನಡೆಸಿದ್ದರು. ಇವುಗಳಿಗೆ ತಮಿಳುನಾಡಿನಿಂದ ಕೆಲವರು ಬೆಂಬಲ ವ್ಯಕ್ತಿಪಡಿಸಿ ಸಹಾಯ ಮಾಡುತ್ತಿದ್ದರು. ಅದ್ದರಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸಹಾಯ ಮಾಡಲು ಇವುಗಳನ್ನು ಸಂಗ್ರಹಿಸುವ ಸಾಧ್ಯತೆ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಸ್ಫೋಟಗಳು ಪತ್ತೆಯಾಗಿರುವ ಸ್ಥಳದ ಸುತ್ತಲಿನ ಪ್ರದೇಶವನ್ನು ಯಂತ್ರಗಳಿಂದ ಆಗೆದಿರುವ ಪೊಲೀಸರು 50ಕ್ಕೂ ಹೆಚ್ಚು ಮದ್ದು ಗಂಡುಗಳ ಪೆಟ್ಟಿಗೆಯನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ 22 ಪೆಟ್ಟಿಗೆಗಳ ಮೆಷನ್ ಗನ್ ಬುಲೆಟ್ (ಪ್ರತಿ ಪೆಟ್ಟಿಗೆಯಲ್ಲಿ 7.60 ಮಿಮಿ 250 ಗಂಡುಗಳು), ಮಧ್ಯಮ ಮೆಷಿನ್ ಗನ್ ಗುಂಡುಗಳ ನಾಲ್ಕು ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಯಲ್ಲಿ 100 ಗುಂಡುಗಳು) ಮತ್ತು 25 ಪೆಟ್ಟಿಗೆಯಲ್ಲಿ ಸಣ್ಣ ಮೆಷಿನ್ ಗನ್ ಬುಲೆಟ್ (12.7 ಎಂ.ಎಂ ಗಾತ್ರದ 250 ಬುಲೆಟ್) ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ರಾಮನಾಥಪುರಂ ಡಿಎಸ್ಪಿ ಓ ಪ್ರಕಾಶ್ ಮೀನಾ, ತಮ್ಮ ತಂಡವು ಯಂತ್ರಗಳ ಸಹಾಯದಿಂದ ಸದ್ಯ ಸ್ಫೋಟಕಗಳು ಪತ್ತೆಯಾಗಿರುವ ಸುತ್ತಲಿನ ಮತ್ತಷ್ಟು ಸ್ಥಳವನ್ನು ಅಗೆದು ಅಪಾರ ಪ್ರಮಾಣದ ಸ್ಫೋಟಗಳೊಂದಿಗೆ, ಸ್ವಯಂ ಲೋಡ್ ರೈಪಲ್ ಬುಲೆಟ್ ಗಳು ಪತ್ತೆ ಮಾಡಿದೆ. ಪ್ರಸ್ತುತ ನಾವು ಬುಲೆಟ್ ಗಳ ಸಂಖ್ಯೆಯನ್ನು ಮತ್ತು ಅವುಗಳ ಮೂಲವನ್ನು ಪರಿಶೀಲಿಸುತ್ತಿದ್ದೇವೆ. ಪತ್ತೆಯಾದ ಗುಂಡುಗಳು 25 ವರ್ಷಗಳ ಹಳೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *