ಬೆಂಗಳೂರು: ನಗರದಲ್ಲಿ ನಾಯಿ ಮತ್ತು ಬೆಕ್ಕು ತಿನ್ನುವ ವಿಚಿತ್ರ ಜನರಿದ್ದು, ಬೆಕ್ಕನ್ನು ಕತ್ತರಿಸಿ ಸುಟ್ಟು ಹಾಕಿ ತಿನ್ನುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ದೃಶ್ಯ ಆದಿಚುಂಚನಗಿರಿ ಮಠದ ಎದುರಿನ ಸರ್ವೀಸ್ ರಸ್ತೆಯಲ್ಲಿ ಕಂಡುಬಂದಿದ್ದು, ಕಳೆದ 1 ತಿಂಗಳಿಂದ ಬೀಡುಬಿಟ್ಟಿರುವ ತಮಿಳುನಾಡಿನಿಂದ ಬಂದಿರುವ ಗುಂಪೊಂದು ಬೆಕ್ಕುಗಳನ್ನು ಕದ್ದು ತಂದು ಕಟ್ ಮಾಡಿ ಅಡುಗೆ ಮಾಡ್ಕೊಂಡು ತಿಂತಿದ್ದಾರೆ. ಮಹಿಳೆಯರು ಮಕ್ಕಳು ಸೇರಿ ಸುಮಾರು 10ಕ್ಕೂ ಹೆಚ್ಚು ಜನರ ಗುಂಪುಗಳು ಇವೆ. ಇವರು ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದಾರೆ.
Advertisement
ಇದನ್ನು ನೋಡಿ ಇದು ಯಾವ ಪ್ರಾಣಿ ಅಂತಾ ಕೇಳಿ ಒಂದು ಕ್ಷಣ ಗಾಬರಿಯಾದ ಸ್ಥಳೀಯರು, ಬಳಿಕ ಅದು ಬೆಕ್ಕು ಅಂತಾ ಗೊತ್ತಾದ ತಕ್ಷಣ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅಷ್ಟರಲ್ಲಿ ಆ ತಂಡದ ಎಲ್ಲರೂ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅಷ್ಟೇ ಅಲ್ಲದೇ ಶುಕ್ರವಾರ ಮಧ್ಯಾಹ್ನದ ವೇಳೆ ಬೀದಿ ನಾಯಿಯನ್ನು ಕೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement