ಬೆಂಗಳೂರು: ಮೇಕೆದಾಟು ಬಳಿಕ ಕೆ.ಸಿ ವ್ಯಾಲಿ ಯೋಜನೆಗೂ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ.
ಕೆ.ಸಿ ವ್ಯಾಲಿ ಜೊತೆಗೆ ಕೋಲಾರದ ಮಾಲೂರು ಬಳಿ ನಿರ್ಮಿಸುತ್ತಿರುವ ಮಾರ್ಕೇಂಡೇಯ ಜಲಾಶಯಕ್ಕೂ ಅಡ್ಡಗಾಲು ಹಾಕುತ್ತಿದೆ. ಎರಡು ಯೋಜನೆಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಮತ್ತೆ ತಮಿಳುನಾಡು ಕ್ಯಾತೆ
Advertisement
Advertisement
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಪುದುಚೇರಿ ನಡುವೆ ಇರುವ ಪೆನ್ನಾರ್ ಮತ್ತು ಪಾಲಾರ್ ನದಿ ನೀರು ಹಂಚಿಕೆ ವಿಚಾರವಾಗಿ ವಿವಾದವನ್ನು ಶುರು ಮಾಡಿದ್ದು, ಪೆನ್ನಾರ್ ನದಿ ಕಣಿವೆಯಲ್ಲಿ ಯಾವುದೇ ಯೋಜನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದೆ. ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?
Advertisement
ಕೆಸಿ ವ್ಯಾಲಿ ಯೋಜನೆ ಪೆನ್ನಾರ್ ನದಿ ಕಣಿವೆ ಪ್ರದೇಶದಲ್ಲಿದೆ. ಕೆ.ಸಿ ವ್ಯಾಲಿ ಯೋಜನೆಗೆ ಬೆಂಗಳೂರಿನ ಚರಂಡಿ ನೀರನ್ನು ಶುದ್ಧೀಕರಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ಕಾವೇರಿ ನದಿ ಕಣಿವೆ ವ್ಯಾಪ್ತಿಯಲ್ಲಿದೆ. ಬೆಂಗಳೂರಿನಲ್ಲಿ ಬಳಕೆಯಾಗಿ ಚರಂಡಿ ಸೇರಿದ ನೀರನ್ನು ಶುದ್ಧಗೊಳಿಸಿ ಕಾವೇರಿ ನದಿಗೆ ಮರಳಿ ಬಿಡಬೇಕು.
Advertisement
ಈಗ ಕೆ.ಸಿ ವ್ಯಾಲಿಗೆ ನೀರು ಹರಿಸುವುದು ನದಿ ಕಣಿವೆ ಬದಲಾಯಿಸಿದಂತೆ. ಎತ್ತಿನಹೊಳೆ ಯೋಜನೆಗಾಗಿ ನಿರ್ಮಿಸಲು ಹೊರಟಿರುವ ಮಾರ್ಕೇಂಡೇಯ ಜಲಾಶಯ ಪೆನ್ನಾರ್ ನದಿ ನೈಸರ್ಗಿಕ ಹರಿವಿಗೆ ಧಕ್ಕೆ ಮಾಡಲಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ಆರು ಜಿಲ್ಲೆಗೆ ತೊಂದರೆಯಾಗಲಿದೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ನೆಪದಲ್ಲಿ ಕೃಷಿ ನೀರಾವರಿಗೆ ಕರ್ನಾಟಕ ಯೋಜನೆ ರೂಪಿಸಿದೆ. ಕೆಳ ರಾಜ್ಯಗಳ ಒಪ್ಪಿಗೆ ಇಲ್ಲದೆ ಕೆ.ಸಿ ವ್ಯಾಲಿ ಸೇರಿ ಇನ್ನು ಯಾವ ಯೋಜನೆಗೂ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.