ಚೆನ್ನೈ: ತಮಿಳುನಾಡು ಶಾಸಕರೊಬ್ಬರ ಮೊಮ್ಮಗ ‘Grandson of Nagercoil MLA MR Gandhi’ ಎಂದು ಬೈಕ್ ನಂಬರ್ ಪ್ಲೇಟ್ ಹಾಕುವ ಮೂಲಕ ಸುದ್ದಿಯಾಗಿದ್ದಾನೆ.
ನಾಗರಕೋಯಿಲ್ ಶಾಸಕ ಎಂ.ಆರ್.ಗಾಂಧಿ ಅವರ ಮೊಮ್ಮಗ ಎಂದು ನಂಬರ್ ಪ್ಲೇಟ್ ಬರೆದ ಬೈಕ್ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರದ ದುರುಪಯೋಗವಾಗಿದೆ. ಇದು ಚಲನಚಿತ್ರ ಕಥೆಗಳನ್ನು ಮೀರಿಸುತ್ತದೆ. ತೂ ಜಂತಾ ನಹೀ ಮೇರಾ ದಾದಾ ಕೌನ್ ಹೈ’ ನಂಬರ್ ಪ್ಲೇಟ್ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು
Advertisement
Grandson of TN MLA do not need number plate and can violate traffic rules pic.twitter.com/aEnRrHTeTh
— SAI@SAA (@sainairv) March 14, 2022
ಎಂಆರ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಈ ಬೈಕ್ ಮೇಲೆ ಅಮರೀಶ್ ತಿರುಗುವುದು ಕಂಡು ಬಂದಿದೆ. ವಿಚಿತ್ರವೆಂದರೆ ಎಂ.ಆರ್.ಗಾಂಧಿ ಅವರು ಮದುವೆಯಾಗಿಲ್ಲವಂತೆ. ಹೀಗಿದ್ದರು ಮೊಮ್ಮಗ ಎಲ್ಲಿಂದ ಬಂದ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಚಿತ್ರದಲ್ಲಿರುವುದು ಶಾಸಕ ಗಾಂಧಿ ಅವರ ಸಹಾಯಕ ಕಣ್ಣನ್ನ ಅವರ ಪುತ್ರ ಎಂದು ತಿಳಿದು ಬಂದಿದೆ.