ಚೆನ್ನೈ: ಆರ್‌ಸಿಬಿ (RCB) ಹಾಗೂ ವಿರಾಟ್ ಕೊಹ್ಲಿಯನ್ನು (Virat Kohli) ಗೇಲಿ ಮಾಡಿದ್ದಕ್ಕೆ ಯುವಕನೋರ್ವ ಸ್ನೇಹಿತನನ್ನು (Friend) ಹತ್ಯೆ ಮಾಡಿದ ಘಟನೆ ತಮಿಳುನಾಡಿನ (Tamil Nadu) ಅರಿಯಲೂರಿನ ಪೊಯ್ಯೂರ್‌ನಲ್ಲಿ ನಡೆದಿದೆ.
ವಿಘ್ನೇಶ್(24) ಕೊಲೆಯಾದ ವ್ಯಕ್ತಿ ಹಾಗೂ ಧರ್ಮರಾಜ್ (21) ಕೊಲೆ ಆರೋಪಿ. ಸ್ನೇಹಿತರಾಗಿದ್ದ ಧರ್ಮರಾಜ್ ಮತ್ತು ವಿಘ್ನೇಶ್ ಇಬ್ಬರು ಸೇರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್‍ಗೆ ಹೋಗಿದ್ದರು. ಈ ವೇಳೆ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡಿತ್ತಿದ್ದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಕುರಿತು ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನಲ್ಲಿ ಯಾವುದು ಉತ್ತಮ ಎಂಬುದರ ಕುರಿತು ವಾಗ್ವಾದ ನಡೆದಿದೆ. ಈ ವೇಳೆ ವಿಘ್ನೇಶ್ ಆರ್‌ಸಿಬಿಯನ್ನು ಗೇಲಿ ಮಾಡಿ ಕೊಹ್ಲಿಯನ್ನು ಅಣಕಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ವಿಘ್ನೇಶ್ ಹಾಗೂ ಧರ್ಮರಾಜ್ ಮಧ್ಯೆ ನಡೆಯುತ್ತಿದ್ದ ವಾಗ್ವಾದ ಮಿತಿ ಮೀರಿದೆ. ಈ ವೇಳೆ ಕೋಪಗೊಂಡಿದ್ದ ಧರ್ಮರಾಜ್ ಮದ್ಯದ ಬಾಟಲಿ ತೆಗೆದು ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಆತನ ತಲೆಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಮಳೆ – 92 ವಾರ್ಡ್‍ಗಳಲ್ಲಿ ವರುಣಾರ್ಭಟ
ಘಟನೆಗೆ ಸಂಬಂಧಿಸಿ ನಿರ್ಜನ ಸ್ಥಳದಲ್ಲಿ ವಿಘ್ನೇಶ್ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಮೊಬೈಲ್ ದಾಖಲೆಯ ಆಧಾರದ ಮೇಳೆ ಧರ್ಮರಾಜ್‍ನನ್ನು ಬಂಧಿಸಿದ್ದಾರೆ. ಮೃತ ವಿಘ್ನೇಶ್ ಅವರು ಸಿಂಗಾಪುರಕ್ಕೆ ತೆರಳಲು ಮುಂದಾಗಿದ್ದು, ಐಟಿಐ ಮುಗಿಸಿದ್ದರು. ಈ ಘಟನೆ ನಡೆದಾಗ ಅವರು ಉದ್ಯೋಗ ವೀಸಾಕ್ಕಾಗಿ ಕಾಯುತ್ತಿದ್ದನು. ಇದನ್ನೂ ಓದಿ: ಸಿದ್ದು-ಡಿಕೆಶಿಯನ್ನ ಪದೇ ಪದೇ ಜೋಡಿಸಿ ನಿಲ್ಲಿಸುವ ರಾಹುಲ್ – ಜೋಡಣೆ ಅಸಲಿ ಆಟ ಏನ್ ಗೊತ್ತಾ?