ಚೆನ್ನೈ: ಪತ್ನಿಯನ್ನು ಕೊಲೆ ಮಾಡಲು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಫೋನಿನಲ್ಲಿ ಬರೋಬ್ಬರಿ 52 ವಿಡಿಯೋಗಳನ್ನು ಡೌನ್ಲೌಡ್ ಮಾಡಿ ವೀಕ್ಷಿಸಿದ್ದ ಪಾತಕಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳು ನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪುಷ್ಪ(28) ಪತಿಯಿಂದಲೇ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಪತಿ ಡಿ. ರಾಮದಾಸ್(34)ನನ್ನು ಬಂಧಿಸಲಾಗಿದೆ. ಈತ ಪತ್ನಿಯನ್ನು ಕೊಲೆ ಮಾಡಿ ಬಳಿಕ ಸ್ನಾನ ಮಾಡುವಾಗ ಮುಳುಗಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.
Advertisement
ಘಟನೆ ವಿವರ?: ಆರೋಪಿ ರಾಮದಾಸ್ 20 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದನು. ತಮಿಳುನಾಡಿದ ತಿರುಪಾಲಾ ಪಂಡಾಲ್ ಮೂಲದ ಪುಷ್ಪಾರನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದನು. ಈ ದಂಪತಿಗೆ 2 ವರ್ಷದ ಮಗಳಿದ್ದಳು. ಈ ದಂಪತಿ ನಾಲ್ಕು ತಿಂಗಳ ಹಿಂದೆ ಮಗುವಿನ ಸಮೇತ ವಿಲ್ಲಪುರಂನ ಇರುಕುಂಡಿ ಗ್ರಾಮಕ್ಕೆ ಬಂದಿದ್ದರು.
Advertisement
ಆರೋಪಿ ರಾಮದಾಸ್ ತನ್ನ ಪತ್ನಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಡುತ್ತಿದ್ದನು. ಆದ್ದರಿಂದ ಬೇರೆ ಗ್ರಾಮಕ್ಕೆ ಬಂದಿದ್ದನು. ಆದರೆ ಅಲ್ಲಿಯೋ ಪ್ರತಿದಿನವೂ ಈ ವಿಚಾರವಾಗಿವೇ ಜಗಳ ಮಾಡುತ್ತಿದ್ದನು. ಕೊನೆಗೆ ಆಕೆಯನ್ನ ಕೊಲೆ ಮಾಡಲು ನಿರ್ಧರಿಸಿದ್ದು, ನೀರಿನಲ್ಲಿ ಮುಳಗಿಸಿ ಕೊಂದಿದ್ದನು.
Advertisement
ಜುಲೈ 15 ರಂದು ಪೊಲೀಸರಿಗೆ ಕೊಳದಲ್ಲಿ ಪುಷ್ಪ ದೇಹ ಪತ್ತೆಯಾಗಿದೆ. ಪೊಲೀಸರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದರು. ಬಳಿಕ ವಿಚಾರಣೆಯ ವೇಳೆ ಆರೋಪಿಯ ಫೋನ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಸಾಕಷ್ಟು ವಿಡಿಯೋಗಳು ಡಿಲೀಟ್ ಆಗಿರೋದನ್ನ ಪೊಲೀಸರು ಗಮನಿಸಿದ್ದಾರೆ. ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಡಿಲೀಟ್ ಆದ ವಿಡಿಯೋಗಳ ಮತ್ತೆ ಬ್ಯಾಕ್ಅಪ್ ಪಡೆದುಕೊಂಡಿದ್ದಾರೆ. ಪೊಲೀಸರೇ ಆ ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ದರು.
Advertisement
ಆರೋಪಿ ರಾಮದಾಸ್ ತನ್ನ ಫೋನಿನಲ್ಲಿ ಮಹಿಳೆಯನ್ನು ಹೇಗೆ ಪತ್ತೆ ಹಚ್ಚದಂತೆ ಕೊಲೆ ಮಾಡುವುದು ಎಂದು ಸುಮಾರು 52 ವೀಡಿಯೊಗಳನ್ನು ನೋಡಿದ್ದಾನೆ. ಆಗ ಮೃತ ಪುಷ್ಪ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಆದ್ದರಿಂದ ಗರ್ಭಿಣಿ ಮಹಿಳೆಯನ್ನು ಹೇಗೆ ಕೊಲ್ಲಬೇಕೆಂದು ಕೂಡ ವಿಡಿಯೋಗಳನ್ನು ಅವನು ನೋಡಿದ್ದಾನೆ. ಅದರಂತೆಯೇ ಆಕೆಯ ಬಾಯಿಯನ್ನು ಮುಚ್ಚಿ ಕೊಲೆ ಮಾಡಿದ್ದಾನೆ ಎಂದು ವಿಲ್ಲಪುರಂ ಪೊಲೀಸ್ ಅಧೀಕ್ಷಕ ಎಸ್.ಜಯಕುಮಾರ್ ಅವರು ತಿಳಿಸಿದ್ದಾರೆ.
ಪೊಲೀಸರಿಗೆ ಪತಿಯೇ ಆರೋಪಿ ಎಂದು ತಿಳಿದು ಬಳಿಕ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಪತಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಶನಿವಾರ ಬಂಧಿಸಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.