ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

Public TV
1 Min Read
TAMIL NADU

ಚೆನ್ನೈ: 13 ವರ್ಷದ ಬಾಲಕಿಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸೋಮವಾರ ಈ ಘಟನೆ ನಡೆದಿದ್ದು, ರಾಜಲಕ್ಷ್ಮೀ(13) ಕಾಮುಕನಿಗೆ ಬಲಿಯಾದ ಬಾಲಕಿ. ದಿನೇಶ್ ಕುಮಾರ್ ಬಾಲಕಿಗೆ ಕಿರುಕುಳವನ್ನು ನೀಡಿದ ಆರೋಪಿ. ತಲವಾಯಪಟ್ಟಿ ನಿವಾಸಿಯಾದ ರಾಜಲಕ್ಷ್ಮೀ 8 ನೇ ತರಗತಿ ಓದುತ್ತಿದ್ದಳು. ಪ್ರತಿನಿತ್ಯ ಬಾಲಕಿ ರಾಜಲಕ್ಷ್ಮೀಗೆ ದಿನೇಶ್ ಚುಡಾಯಿಸುತ್ತಿದ್ದ. ಇದೇ ವೇಳೆ ಸೋಮವಾರ ರಾಜಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಮನೆಯೊಳಗೆ ನುಗ್ಗಿ ಅವಳನ್ನು ಮತ್ತಷ್ಟು ಚುಡಾಯಿಸಿದ್ದಾನೆ ಎಂದು ಅತ್ತೆರ್ ಪೊಲೀಸರು ಹೇಳಿದ್ದಾರೆ.

TAMILNADU 1

ಇದೇ ವೇಳೆ ದಿನೇಶ್ ಮನೆಯೊಳಗೆ ನುಗ್ಗಿದಾಗ ರಾಜಲಕ್ಷ್ಮೀ ಕಿರುಚಿಕೊಂಡಿದ್ದಾಳೆ. ರಾಜಲಕ್ಷ್ಮೀಯ ಕಿರುಚಾಟವನ್ನು ಕೇಳಿಸಿಕೊಂಡು ತಾಯಿ ಸ್ಥಳಕ್ಕೆ ಆಗಮಿಸುತ್ತಿದ್ದರು. ಇದನ್ನು ಕಂಡ ಕಾಮುಕ ಬಾಲಕಿ ಮೇಲೆ ಹಲ್ಲೆ ಮಾಡಿ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದು ಹೋಗಿದ್ದಾರೆ.

ಈ ಘಟನೆಯ ವೇಳೆ ಆರೋಪಿ ದಿನೇಶ್ ಮದ್ಯಪಾನ ಸೇವನೆ ಮಾಡಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯಂತೆ ವರ್ತಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *