ಚೆನ್ನೈ: ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಕ್ರೀಡಾಕೂಟಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು 300 ಜನರಿಗೆ ಅವಕಾಶ ನೀಡಿದ್ದು, ಎಲ್ಲರಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ.
Advertisement
ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಟಡಿಸಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಜಲ್ಲಿಕಟ್ಟು ಕ್ರೀಡೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಮತ್ತೆ ಜಲ್ಲಿಕಟ್ಟು ಕ್ರೀಡಾಕೂಟವನ್ನು ಆಯೋಜಿಸಿರುವ ಸರ್ಕಾರ ಕೊರೊನಾ ನಿಯಮಗಳನ್ನು ಜಾರಿಗೊಳಿಸಿದ್ದು, ಗೂಳಿ ಪಳಗಿಸುವವರು ಸೇರಿ 300 ಜನ ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದು ಸೂಚಿಸಿದೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್
Advertisement
#Omicron: Tamil Nadu Govt issues SOP for Jallikattu events, allows only 150 spectators or 50% of seating capacity (whichever is less)
Full vaccination or negative RT-PCR test report not older than 48 hours a must
(File photo) pic.twitter.com/vZip5GIdzY
— ANI (@ANI) January 10, 2022
Advertisement
ಗೂಳಿ ಪಳಗಿಸುವ 150 ಮಂದಿ 48 ಗಂಟೆಗಳೊಳಗೆ ಕೊರೊನಾ ನೆಗಟಿವ್ ವರದಿ ಸಲ್ಲಿಸಬೇಕು ಮತ್ತು ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು 150 ಮಂದಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು, ಅಲ್ಲರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಖಡ್ಡಾಯಗೊಳಿಸಿದೆ.
Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕ್ರೀಡಾಕೂಟವನ್ನು ವೀಕ್ಷಿಸಲು ಟಿವಿ ವಾಹಿನಿಗಳನ್ನು ನೇರ ಪ್ರಸಾರ ವ್ಯವಸ್ಥೆಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಜನ ಗುಂಪು ಸೇರದಂತೆ ಸರ್ಕಾರ ಮನವಿ ಮಾಡಿದೆ. ಇದನ್ನೂ ಓದಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೊನಾ ಪಾಸಿಟಿವ್
ಈ ಸ್ಪರ್ಧೆಯಲ್ಲಿ ಸ್ಥಳೀಯ ತಳಿಯ ಹೋರಿಗಳನ್ನು ಬಳಸಬಹುದು ಆದರೆ ವಿದೇಶಿ ಹೋರಿಗಳನ್ನು ಬಳಸುವಂತಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.