ತಮಿಳುನಾಡಿನಲ್ಲಿ ಭಾರೀ ಮಳೆ – 5 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌, ಚೆನ್ನೈ ಜಲಾವೃತ

Public TV
2 Min Read
chennai rain

ಚೆನ್ನೈ: ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಸಂಭವಿಸಿದ್ದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ (Chennai) ಭಾರೀ ಮಳೆಯಾಗುತ್ತಿದೆ. ರಸ್ತೆಗಳು ನೀರಿನಿಂದ ಜಲಾವೃತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ದಟ್ಟವಾದ ಮಂಜು ಅವರಿಸಿದ್ದು ರಸ್ತೆಗಳು ಕಾಣದಾಗಿದೆ.

ತಮಿಳುನಾಡಿನ ಕರಾವಳಿ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಮಂಗಳವಾರದಿಂದ ಮುಂದಿನ ಐದು ದಿನಗಳ ಕಾಲ ತೀವ್ರ ಮಳೆಯಾಗುವ (Heavy Rainfall) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ವಾಯುಭಾರ ಕುಸಿತದಿಂದ ರಾಮನಾಥಪುರಂ, ತಿರುಚಿರಾಪಳ್ಳಿ, ಪೆರಂಬಲೂರು, ಕಲ್ಲಕುರಿಚಿ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ನೀವು ಗೆದ್ದಾಗ ಮಾತ್ರ ಇವಿಎಂ ತಿರುಚಿರಲ್ವಾ? – ಬ್ಯಾಲೆಟ್‌ ಪೇಪರ್‌ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳು ಮತ್ತು ಕಾರೈಕಲ್‌ನ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಒಂದು ಅಥವಾ ಎರಡು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.

ಅರಿಯಲೂರ್, ತಿರುವರೂರ್, ನಾಗಪಟ್ಟಣಂ, ತಂಜಾವೂರು, ಪುದುಕೊಟ್ಟೈ, ವಿಳ್ಳುಪ್ಪುರಂ, ಪುದುಚೇರಿ, ಶಿವಗಂಗಾ, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ರಾಣಿಪೇಟ್ ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಭಾರೀ ಮಳೆಯಿಂದಾಗಿ, ರಾಮನಾಥಪುರಂ, ತೂತುಕುಡಿ, ತಿರುನೆಲ್ವೇಲಿ, ತೆಂಕಶಿ ಮತ್ತು ತಿರುವರೂರು ಜಿಲ್ಲೆಗಳಲ್ಲಿ ನವೆಂಬರ್ 20 ಬುಧವಾರದಂದು ಶಾಲೆಗಳಿಗೆ ರಜೆ ನೀಡಲಾಗಿತ್ತು.

 

Share This Article