ಬೆಂಗಳೂರು: ತಮಿಳುನಾಡು ಸರ್ಕಾರ (Tamil Nadu Government) ಇಷ್ಟು ತುರ್ತಾಗಿ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕಾವೇರಿ ನೀರನ್ನು (Cauvery Water) ಬಿಡುವಂತೆ ಕರ್ನಾಟಕಕ್ಕೆ (Karnataka) ಆದೇಶ ನೀಡಿ ಎಂದು ತಮಿಳುನಾಡು ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕರ್ನಾಟಕ ಕಾವೇರಿ ನೀರು ಬಿಡುತ್ತಿಲ್ಲ: ಸುಪ್ರೀಂ ಮೊರೆ ಹೋದ ತಮಿಳುನಾಡು
Advertisement
Advertisement
ಕೆಂಪೇಗೌಡ ಬಡಾವಣೆ ವೀಕ್ಷಣೆ ವೇಳೆ ಪ್ರತಿಕ್ರಿಯಿಸಿದ ಅವರು, ನಮಗೆ ಕುಡಿಯುವ ನೀರಿನ ಅಗತ್ಯ ನೋಡಿಕೊಂಡು ನೀರು ಬಿಡುಗಡೆ ಮಾಡುತ್ತೇವೆ. ತಮಿಳುನಾಡಿಗೆ ಮನವಿ ಮಾಡುತ್ತೇವೆ, ಇಬ್ಬರ ರೈತರ ಹಿತವನ್ನು ಕಾಯಬೇಕಿದೆ. ನಾವು ಜಗಳ ಮಾಡಿಕೊಳ್ಳುವ ಪ್ರಮೇಯ ಇಲ್ಲ ಎಂದರು.
Advertisement
ತಮಿಳುನಾಡು ಅರ್ಜಿಯ ಬಗ್ಗೆ ನಮ್ಮ ವಕೀಲರ ಜೊತೆ ಮಾತನಾಡುತ್ತೇವೆ. ಸುಪ್ರೀಂ ಕೋರ್ಟ್‌ಗೆ ನಾವು ಮಳೆ ಎಷ್ಟು ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
Advertisement
Web Stories