ಚೆನೈ: ಹಣಕಾಸಿನ ಹಕ್ಕು ಹೊಂದಿರುವ ಆನ್‌ಲೈನ್ ಗೇಮ್‌ಗಳನ್ನು (ಆನ್‌ಲೈನ್ ಜೂಜು ಆಟಗಳು) ನಿಷೇಧಿಸಲು ತಮಿಳುನಾಡು ಸರ್ಕಾರ (Tamil Nadu Government) ಚಿಂತಿಸಿದೆ. ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇಂತಹದ್ದೊಂದು ಮಹತ್ವದ ನಿರ್ಧಾರ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಆನ್‌ಲೈನ್ ಗೇಮ್‌ಗಳಿಂದ (Online Games) ಪ್ರಸುತ್ತ ವರ್ಷದಲ್ಲಿ ರಾಜ್ಯದಲ್ಲಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಎಚ್ಚೆತ್ತುಕೊಂಡ ಸರ್ಕಾರ, ಆನ್‌ಲೈನ್ ರಮ್ಮಿ ಮತ್ತು ಪೋಕರ್ ಆಟಗಳನ್ನು ಎರಡು ವಾರಗಳವರೆಗೆ ನಿಷೇಧಿಸುವ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ಶಾಶ್ವತವಾಗಿ ನಿಷೇಧ ಮಾಡುವ ಬಗ್ಗೆ ಚಿಂತನೆ ಆರಂಭಗೊಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ
Advertisement
Advertisement
ಇತ್ತೀಚೆಗೆ ಚೆನೈ ನಿವಾಸಿ ಭವಾನಿ (29) ಆನ್‌ಲೈನ್ ರಮ್ಮಿ ಗೀಳಿಗೆ ಬಿದ್ದು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬಳಿಕ ರಾಜ್ಯ ಸರ್ಕಾರವು ಆನ್‌ಲೈನ್ ಆಟಗಳ ಪರಿಣಾಮಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು. ಜೂನ್ 27 ರಂದು ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಕೆ.ಚಂದ್ರು ನೇತೃತ್ವದ ಸಮಿತಿಯು ಎರಡೂ ಆಟಗಳು ಮತ್ತು ಅವುಗಳ ಜಾಹೀರಾತುಗಳನ್ನು ನಿಷೇಧಿಸಲು ಶಿಫಾರಸು ಮಾಡಿತು.
Advertisement
ಆನ್‌ಲೈನ್ ಆಟಗಳನ್ನು ನಿಷೇಧಿಸುವ ಹಿಂದಿನ ಶಾಸನವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದ್ದರಿಂದ, ಸಮಿತಿಯು ರಾಜ್ಯ ಸರ್ಕಾರವು ʻಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆʼ ಆಧಾರದ ಮೇಲೆ ಹೊಸ ಶಾಸನವನ್ನು ತರಲು ಶಿಫಾರಸು ಮಾಡಿದೆ. ಇದರ ಅನ್ವಯ ಕಾನೂನು ಜಾರಿ ಮಾಡಲು ಸರ್ಕಾರ ತಯಾರಿ ಆರಂಭಿಸಿದೆ. ಇದನ್ನೂ ಓದಿ: ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್
Advertisement
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು, 2021 ರಲ್ಲಿ ವರದಿಯಾದ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ತಮಿಳುನಾಡು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕವು 18,925 ಆತ್ಮಹತ್ಯೆಗಳನ್ನು ದಾಖಲಿಸಿದೆ ಮತ್ತು ಮಹಾರಾಷ್ಟ್ರ (22,207) ಮೊದಲ ಸ್ಥಾನದಲ್ಲಿದೆ.