ನವದೆಹಲಿ/ಚೆನ್ನೈ: ಕಾವೇರಿ ನದಿಯಿಂದ (Cauvery River) ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿನಿತ್ಯ 8 ಕ್ಯುಸೆಕ್ ನೀರು ಹರಿಸಲು ತೀರ್ಮಾನ ಕೈಗೊಂಡ ಮರುದಿನವೇ ತಮಿಳುನಾಡು ಸರ್ಕಾರ (Tamil Nadu Government) ಸರ್ವಪಕ್ಷಗಳ ಸಭೆ ಕರೆದಿದೆ. ನಾಳೆ (ಮಂಗಳವಾರ) ಚೆನ್ನೈನಲ್ಲಿ ಜಲಸಂಪನ್ಮೂಲ ಸಚಿವ ದೊರೈಮುರುಗನ್ (Durai Murugan) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
Advertisement
ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಜುಲೈ 31ರ ವರೆಗೆ ನಿತ್ಯ 8 ಕ್ಯುಸೆಕ್ ನೀರು ಹರಿಸಲು, ಮಳೆ ಕಡಿಮೆಯಾದ್ರೆ, ಅದಕ್ಕಿಂತಲೂ ಕಡಿಮೆ ನೀರು ಹರಿಸಲು ತೀರ್ಮಾನಿಸಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ
Advertisement
Advertisement
ಅಲ್ಲದೇ ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರೂ ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ 1 ಟಿಎಂಸಿ ನೀರು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್. ಅಶೋಕ್ ಬೆಂಬಲ!
Advertisement
ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ನಿರ್ಧರಿಸಿದ್ದು ಅಲ್ಲಿಯವರೆಗೂ ನೀರು ಬಿಡುಗಡೆ ಮಾಡದಿರಲು ಸರ್ವ ಪಕ್ಷಯಲ್ಲಿ ತಿರ್ಮಾನಿಸಿತ್ತು. ರಾಜ್ಯ ಸರ್ಕಾರದ ಈ ತಿರ್ಮಾನದ ಬೆನ್ನಲ್ಲೇ ಈಗ ತಮಿಳುನಾಡಿನ ಪಕ್ಷಗಳ ಸಭೆಯನ್ನು ಸಚಿವ ದೊರೈಮುರುಗನ್ ಕರೆದಿದ್ದು, ಒತ್ತಡ ಹೆಚ್ಚಿಸುವ ಪ್ರಯತ್ನ ಆರಂಭಿಸಿದೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು