ಚೆನ್ನೈ: ತರಗತಿಯ ಶಿಕ್ಷಕನೊಬ್ಬನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಡಿ.ಮುರಳಿಕೃಷ್ಣ (55) ವಿದ್ಯಾರ್ಥಿನಿಗೆ ಕಿರುಕುಳ ನಿಡುತ್ತಿದ್ದ ಶಿಕ್ಷಕ. 7ನೇ ತರಗತಿಯ ವಿದ್ಯಾರ್ಥಿನಿ ಈ ಹಿಂದೆ ಶಿಕ್ಷಕನು ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ತನ್ನ ಪೋಷಕರಿಗೆ ದೂರು ನೀಡಿದ್ದಳು. ಈ ಹಿಂದೆ ಬಾಲಕಿಯು ಶಿಕ್ಷಕನಿಗೆ ಎಚ್ಚರಿಕೆ ನೀಡಿದ್ದರೂ ಸಹ ಆತ ಅದನ್ನೇ ಮುಂದುವರಿಸಿದ್ದ. ತಂದೆ ತಾಯಿಯರು ಬಾಲಕಿಗೆ ಧೈರ್ಯ ತುಂಬುವ ಬದಲು, ಶಿಕ್ಷಕ ನಿನ್ನ ತಾತನ ವಯಸ್ಸಿನವನಾಗಿದ್ದಾನೆ ಸಹಿಸಿಕೋ ಎಂದು ಹೇಳಿದ್ದರು. ಇದನ್ನೂ ಓದಿ: 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ
Advertisement
Advertisement
ಪೊಲೀಸರ ಪ್ರಕಾರ, ಬಾಲಕಿಯ ಪೋಷಕರ ಈ ವರ್ತನೆ ಅವಳನ್ನು ತೀವ್ರ ಖಿನ್ನತೆಗೆ ತಳ್ಳಿದ್ದು, ಶನಿವಾರ ತನ್ನ ಮನೆಯಲ್ಲಿ ವಾರ್ನಿಷ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸೋಮವಾರ ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ. ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. . ಇದನ್ನೂ ಓದಿ: ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
Advertisement
Advertisement
ಅಷ್ಟೇ ಅಲ್ಲದೇ ಭಾರತೀಯ ದಂಡ ಸಂಹಿತೆ(ಐಪಿಸಿ) ಹಲವು ವಿಭಾಗಗಳು ಮತ್ತು ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆ 1998ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿರುವಲ್ಲಂ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಬಾಲಕಿಯ ಸ್ಥಿತಿ ಸ್ಥಿರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.