ಚೆನ್ನೈ: ರಾಜ್ಯದ ಸಿಪ್‌ಕಾಟ್‌ನಲ್ಲಿರುವ (SIPCOT) ಪಣಪಕ್ಕಂನ (Panapakkam) ಟಾಟಾ ಮೋಟಾರ್ಸ್ (TATA Motors) ಉತ್ಪಾದನಾ ಘಟಕಕ್ಕೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (CM MK Stalin) ಶನಿವಾರ ಶಂಕು ಸ್ಥಾಪನೆ ನೇರವೇರಿಸಿದರು.
ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಇಂದು ಟಾಟಾ ಮೋಟಾರ್ಸ್ನ ಉತ್ಪಾದನಾ ಘಟಕಕ್ಕೆ ಶಂಕು ಸ್ಥಾಪನೆ ನೇರವೇರಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಇದು ರಾಜ್ಯದಲ್ಲಿ ಕಂಪನಿಗಳಿಗೆ ಮಾತ್ರವಲ್ಲದೇ ಜಾಗತಿಕವಾಗಿ ಇದು ಸ್ಪರ್ಧಿಸಲಿದೆ. ಜೊತೆಗೆ ಟಾಟಾ ಮೋಟಾರ್ಸ್ ತಮಿಳುನಾಡಿನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್ ಲೀಡರ್ ಟಾರ್ಗೆಟ್!
Advertisement
Advertisement
ರಾಣಿಪೇಟ್‌ನ್ನು ಟಾಟಾ ಮೋಟಾರ್ಸ್ ಉತ್ಪಾದನಾ ಘಟಕದ ಹೂಡಿಕೆಯ ಸ್ಥಳವನ್ನಾಗಿ ಆಯ್ಕೆ ಮಾಡಿದಕ್ಕೆ ಧನ್ಯವಾದಗಳು. ಇದು ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಗಂಭೀರವಾಗಿ ಧನಾತ್ಮಕ ಪರಿಣಾಮ ಬೀಳಲಿದೆ ಎಂದು ತಿಳಿಸಿದರು.
Advertisement
ಈ ಉತ್ಪಾದನಾ ಘಟಕಕ್ಕಾಗಿ 9,000 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಇದರಿಂದ 5,000 ಉದ್ಯೋಗ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆಯಿದೆ. ಜೊತೆಗೆ ಇದು ಈ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿ ಪರಿಣಮಿಸಲಿದೆ ಎಂದು ಹೇಳಿದರು.
Advertisement
ಟಾಟಾ ಮೋಟಾರ್ಸ್ನ ಉತ್ಪಾದನಾ ಘಟಕದ ನಿರ್ಮಾಣ ಪೂರ್ಣಗೊಂಡ ನಂತರ ಈ ಸ್ಥಾವರ ಉದ್ಘಾಟನೆಗಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ (N Chandrashekaran) ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಲು ಅವಕಾಶ ಕೋರುತ್ತೇನೆ. ಇದು ರಾಜ್ಯ ಹಾಗೂ ಭಾರತದ ಅತಿದೊಡ್ಡ ಕೈಗಾರಿಕಾ ಸಂಸ್ಥೆಗಳ ನಡುವಿನ ಮಹತ್ವವನ್ನು ಸೂಚಿಸುತ್ತದೆ ಎಂದರು.ಇದನ್ನೂ ಓದಿ: BBK 11: ದೊಡ್ಮನೆಯ 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್
ಶೀಘ್ರದಲ್ಲೇ ಯೋಜನೆ ಪೂರ್ಣಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಹಾಗೂ ಉದ್ಘಾಟನೆಗೆ ಚಂದ್ರಶೇಖರನ್ ಅವರನ್ನು ಖುದ್ದಾಗಿ ಆಹ್ವಾನಿಸಲು ಬಯಸುತ್ತೇನೆ ಎಂದು ತಿಳಿಸಿದರು.