ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರವರು ನಿಧನರಾಗಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ.
ತಮಿಳುನಾಡಿನಲ್ಲಿ ಪುರುಚ್ಚಿ ತಲೈವಿ ಎಂದು ಹೆಸರು ಪಡೆದಿದ್ದ ಜಯಲಲಿತಾರವರು ಮೂಲತಃ ಕರ್ನಾಟಕ ಜಿಲ್ಲೆಯ ಮಂಡ್ಯ ಜಿಲ್ಲೆಯವರಾಗಿದ್ದರು. ರಾಜಕೀಯಕ್ಕೂ ಮುನ್ನ ತಮಿಳು ಚಿತ್ರರಂಗದ ಜನಪ್ರಿಯ ನಟಿಯಾಗಿದ್ದರು. ಎಂ.ಜಿ.ರಾಮಚಂದ್ರನ್ ರವರ ಪರಮಾಪ್ತರಲ್ಲಿ ಗುರುತಿಸಿಕೊಂಡಿದ್ದರು. ಇದೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಹಾಯಕವಾಗಿತ್ತು. ನಂತರ ರಾಜಕೀಯ ಬದಲಾವಣೆಗಳಿಂದ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲರೂ ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದರು.
Advertisement
Advertisement
2016ರ ಸೆಪ್ಟೆಂಬರ್ 22 ರಿಂದ ಜಯಲಲಿತಾ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸತತ 72 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ, ಡಿಸೆಂಬರ್ 5 ರಂದು ವಿಧಿವಶರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು.
Advertisement
ತಮಿಳುನಾಡಿನ ಅಮ್ಮ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿದ್ದವು. ಆದರೆ 2017 ಜನವರಿ 6 ರಂದು ಲಂಡನ್ ವೈದ್ಯ ರಿಚರ್ಡ್ ಬಿಲೆ ಅವರು ಅಮ್ಮಾ ಅನಾರೋಗ್ಯದ ಗುಟ್ಟನ್ನು ಸುದ್ದಿಗೋಷ್ಠಿಯಲ್ಲಿ ರಟ್ಟು ಮಾಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ಜಯಲಲಿತಾ ಅವರಿಗೆ ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲದೇ ಅವರ ರಕ್ತದಲ್ಲಿ ಬ್ಯಾಕ್ಟೀರಿಯಾ ತುಂಬಿಕೊಂಡಿತ್ತು. ಅದು ಹೃದಯಕ್ಕೂ ವಿಸ್ತರಿಸಿತ್ತು.
Advertisement
ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯಕ್ಕೂ ಗುರಿಯಾಗಿದ್ದರು. ಜಯಲಲಿತಾರನ್ನು ಬದುಕಿಸಲು ಅಂತಿಮ ಕ್ಷಣದವರೆಗೂ ಪ್ರಯತ್ನ ಮಾಡಿದ್ದೆವು. ಕೃತಕ ಉಸಿರಾಟ ಯಂತ್ರ ಅಳವಡಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 5ರ ಸಂಜೆ 5 ಗಂಟೆಗೆ ಅವರಿಗೆ ಹೃದಯ ಸ್ತಂಭನವಾಗಿತ್ತು. ಅದಕ್ಕೆ ನಾವೇ ಸಾಕ್ಷಿ. ನಮ್ಮ ಬಳಿ ಯಾವುದೇ ಸಿಸಿಟಿವಿ ದೃಶ್ಯಗಳಿಲ್ಲ, ದೃಶ್ಯಗಳಿದ್ದರೂ ನಾವು ರಿಲೀಸ್ ಮಾಡಲ್ಲ. ರೋಗಿಯ ಖಾಸಗಿತನ ನಮಗೆ ಅತ್ಯಂತ ಮುಖ್ಯ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv