– ದೆಹಲಿಗೆ ಹೋಗಿದ್ದ 364 ಜನರಿಗೆ ಕೊರೊನಾ ಸೋಂಕು
ಚೆನ್ನೈ: ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ತಮಿಳುನಾಡಿನ ಹೆಲ್ತ್ ಸೆಕ್ರಟರಿ ಬೀಲಾ ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.
ಇಂದು ಕೊರೊನಾ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬೀಲಾ ರಾಜೇಶ್, ಇಂದು ಒಂದೇ ದಿನ ತಮಿಳುನಾಡಿನಲ್ಲಿ ಹೊಸ 102 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 411 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
Advertisement
A total of 1200 people, who participated in Delhi's Tableeghi Jamaat event, have been traced in the state. All of them have been placed under quarantine: Beela Rajesh, Tamil Nadu Health Secretary #COVID19 https://t.co/vFoOiRriBv
— ANI (@ANI) April 3, 2020
Advertisement
ಇಂದು ತಮಿಳುನಾಡಿನಲ್ಲಿ 102 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 100 ಜನರು ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ಆಗಿದ್ದು, ಅವುಗಳಲ್ಲಿ 364 ಸೋಂಕಿತರು ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಒಟ್ಟು 1,200 ಜನರನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರನ್ನೂ ಕ್ಯಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬೀಲಾ ರಾಜೇಶ್ ಹೇಳಿದ್ದಾರೆ.
Advertisement
Number of #COVID19 cases reaches 411 including seven discharged people in Tamil Nadu. 1,580 COVID-19 infected & possibly infected people are admitted to different hospitals in the state: Health Minister C VIjayabaskar
— ANI (@ANI) April 3, 2020
Advertisement
ಇದಕ್ಕೂ ಮುನ್ನ ಮಾತನಾಡಿದ್ದ ತಮಿಳುನಾಡಿನ ಆರೋಗ್ಯ ಸಚಿವ ಸಿ ವಿಜಯಬಾಸ್ಕರ್, ನಮ್ಮ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಏಳು ಜನರು ಸೇರಿದಂತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ತಲುಪಿದೆ. 1,580 ಕೊರೊನಾ ವೈರಸ್ ಸೋಂಕಿತ ಮತ್ತು ಶಂಕಿತ ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.
9 people have tested positive for #Coronavirus in Kerala today – 7 in Kasaragod and 1 each in Kannur & Thrissur. Out of them, 3 people had attended Tableeghi Jamaat event in Nizamuddin, Delhi. Total number of positive cases in state now stands at 295: Kerala CM Pinarayi Vijayan pic.twitter.com/jXRCQii8Iv
— ANI (@ANI) April 3, 2020
ಇನ್ನೂ ಕೇರಳದಲ್ಲಿ ಇಂದು 9 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಾಸರಗೋಡಿನಿಂದ 7 ಮತ್ತು ಕಣ್ಣೂರು ಮತ್ತು ತ್ರಿಶೂರ್ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ 3 ಜನರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 295ಕ್ಕೇರಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.