ಕೋಲಾರ: ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಮೂಲದ ಕಂಪನಿಯೊಂದು ನೂರಾರು ಜನರಿಗೆ ಮೋಸ ಮಾಡಿರುವ ಘಟನೆ ಕೋಲಾರ ತಾಲೂಕು ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ತಂಜಾವೂರಿನ ಕ್ರೈಸ್ಟ್ ಇಂಟರ್ ನ್ಯಾಷನಲ್ ಟೂರಿಸಂ ಅಂಡ್ ಫೈನಾನ್ಸ್ ಗ್ರೂಪ್ ಆಫ್ ಕಂಪನಿ ಕಳೆದ ಮೂರು ತಿಂಗಳಿನಿಂದ ರೈತರಿಂದ 50 ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಕಂಪನಿ ಮಾಲೀಕ ಸೆಂದಿಲ್ ಜಾಮೀನಿಗಾಗಿ ಕೋರ್ಟ್‍ಗೆ ಬಂದಿದ್ದು, ಈ ವೇಳೆ ಮೋಸ ಹೋಗಿದ್ದ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ತಮ್ಮ ಹಣ ತಮಗೆ ವಾಪಸ್ ನೀಡುವಂತೆ ಆಗ್ರಹಿಸಿದ್ರು.
Advertisement
Advertisement
ಈ ಬಗ್ಗೆ ಫೈನಾನ್ಸ್ ಕಂಪನಿ ಮಾಲೀಕ ಸೆಂದಿಲ್ ಮಾತನಾಡಿ ನನ್ನ ಸಿಬ್ಬಂದಿ ಮೋಸ ಮಾಡಿದ್ದಾರೆ. ನನಗೆ ಜಾಮೀನು ಸಿಕ್ಕಿದೆ. ಒಂದು ತಿಂಗಳು ಕಾಲಾವಕಾಶ ಕೇಳಿದ್ದು ಜನರ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾನೆ.
Advertisement
ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬ್ಲೇಡ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.