ಚೆನ್ನೈ: ಹಿರಿಯ ವಿದ್ಯಾರ್ಥಿಯ (Senior) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 13 ಪದವಿಪೂರ್ವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಕಾಲೇಜೊಂದರಲ್ಲಿ ನಡೆದಿದೆ.
ಮಾರ್ಚ್ 20 ರಂದು ಕ್ಯಾಂಪಸ್‌ನಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಜೂನಿಯರ್‌ಗಳು ಸೀನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಸ್ಥೆಯ ಉಪಮುಖ್ಯ ವಾರ್ಡನ್ ಡಾ. ಮಹೇಶ್ವರನ್ ಘಟನೆಯನ್ನು ದೃಢಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ಈ ಕುರಿತು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!
- Advertisement 2-
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಹೇಶ್ವರನ್, ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಾಂಶುಪಾಲರು ಮತ್ತು ಮುಖ್ಯ ವಾರ್ಡನ್ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 13 ವಿದ್ಯಾರ್ಥಿಗಳನ್ನು ಗುರುತಿಸಿ ಸಸ್ಪೆಂಡ್ ಮಾಡಲಾಗಿದೆ. ಪೊಲೀಸರಿಗೆ ಸಹ ಈ ಕುರಿತು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್ ರಂಗನಾಥ್ ತಿರುಗೇಟು
- Advertisement 3-
- Advertisement 4-
ಇನ್ನು ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ. ಕೊಯಮತ್ತೂರು ಜಿಲ್ಲಾ ಪೊಲೀಸರು ಕ್ರಿಮಿನಲ್ ಕ್ರಮವನ್ನು ಸಹ ಪ್ರಾರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬಾಣಂತಿ, ನವಜಾತ ಶಿಶು ಸಾವು – ಕುಟುಂಬಸ್ಥರಿಂದ ಆಸ್ಪತ್ರೆ ಗಾಜು ಪುಡಿ ಪುಡಿ, ಪೀಠೋಪಕರಣ ಧ್ವಂಸ