ಚೆನ್ನೈ: ರೈತರೊಬ್ಬರು ಮನೆಯಲ್ಲಿಟ್ಟಿದ್ದ ಸುಮಾರು 50 ಸಾವಿರ ರೂ. ಹಣವನ್ನ ಇಲಿಗಳು ಕಚ್ಚಿ ತಿಂದು ಹಾನಿಗೊಳಿಸಿದ ಪರಿಣಾಮ ಅನ್ನದಾತ ಕಂಗಲಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ವೆಲಿಯಂಗಡು ಗ್ರಾಮದ ನಿವಾಸಿ, 56 ವರ್ಷದ ರಂಗರಾಜ್ ಕಂಗಾಲಾದ ರೈತ. ರಂಗರಾಜ್ ಅವರು ಬಾಳೆ ಬೆಳೆಗಾರರಾಗಿದ್ದು, ಉತ್ಪನ್ನದಿಂದ ಬಂದಿದ್ದ 500 ರೂ. ಹಾಗೂ 2,000 ರೂ. ಮುಖಬೆಲೆಯ 50,000 ರೂ. ಹಣವನ್ನು ಬ್ಯಾಗ್‍ನಲ್ಲಿ ಹಾಕಿ ಮನೆಯೊಳಗೆ ಇಟ್ಟಿದ್ದರು. ಆದರೆ ಇಲಿಗಳು ಹಣವನ್ನು ಕಚ್ಚಿ ತಿಂದು ಹಾಕಿವೆ.
Tamil Nadu: Rs 50000 cash kept by a farmer in a bag in his hut at Velliangadu village of Coimbatore dist, was damaged by rats. Farmer Rangaraj says "It was my earning after selling all my harvest. I approached the local bank to exchange the notes, but the bank officials refused." pic.twitter.com/fNdWGU3Kk1
— ANI (@ANI) October 21, 2019
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ರಂಗರಾಜ್ ಅವರು, ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮಾರಿ ಹಣವನ್ನು ಪಡೆದಿದ್ದೆ. ಆದರೆ ಮನೆಯಲ್ಲಿ ಇಟ್ಟಿದ್ದಾಗ ಇಲಿಗಳು ಹಣವನ್ನು ಹಾನಿಮಾಡಿವೆ. ಹೀಗಾಗಿ ಸ್ಥಳೀಯ ಬ್ಯಾಂಕ್‍ಗಳಿಗೆ ಹೋಗಿ ಹಾನಿಯಾದ ನೋಟುಗಳನ್ನು ತೆಗೆದುಕೊಂಡು ಬೇರೆ ನೋಟುಗಳನ್ನು ಕೊಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಹಣ ಬದಲಾವಣೆಗೆ ನಿರಾರಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಟ್ವಿಟ್ಟಿಗರೊಬ್ಬರು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಟ್ವೀಟ್ ಮಾಡಿರುವ ರಿಷಿ ಬಾಗ್ರಿ ಅವರು, ದಯವಿಟ್ಟು ಈ ರೈತರ ಎಲ್ಲಾ ವಿವರವನ್ನು ನನಗೆ ಕಳುಹಿಸಿಕೊಡಿ. ನಾನು ಅವರಿಗೆ ಸಹಾಯ ಮಾಡಲು ಬಯದುತ್ತೇನೆ ಎಂದು ತಿಳಿಸಿದ್ದಾರೆ.
Please Send me the details of this farmer in my DM . Would like to help him in replacing the notes
— Rishi Bagree (@rishibagree) October 21, 2019