ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಪುತ್ರ ಉದಯನಿಧಿ ಅವರ ಸನಾತನ ಧರ್ಮದ ವಿರುದ್ಧದ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಸ್ಟಾಲಿನ್ ಪುತ್ರಿ ಸೆಂತಾಮರೈ ಸ್ಟಾಲಿನ್ (Senthamarai Stalin) ಅವರು ಮೈಲಾಡುತುರೈ (Mayiladuthurai) ಜಿಲ್ಲೆಯ ಸಿರ್ಕಾಜಿಯಲ್ಲಿರುವ (Sirkazhi) ಸತ್ತೈನಾಥರ್ (Sattainathar) ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ವಿಶೇಷ ದರ್ಶನ ಪಡೆದಿದ್ದಾರೆ.
ಸ್ಟಾಲಿನ್ ಪುತ್ರಿ ದೇವಾಲಯಕ್ಕೆ ಆಗಮಿಸಿದ ವೇಳೆ ಆಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ಸೆಂತಾಮರೈ ಸ್ಟಾಲಿನ್ ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇಗುಲಗಳಿಗೆ ಭೇಟಿ ನೀಡಿದ್ದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸತ್ತೈನಾಥರ್ ದೇವಾಲಯವು ಬೆಟ್ಟದ ಮೇಲಿರುವ ದೇವಾಲಯವಾಗಿದ್ದು, ಮೂರು ಹಂತಗಳಲ್ಲಿ ಭಗವಾನ್ ಶಿವನಿಂದ ಸ್ತೋತ್ರಗಳನ್ನು ಪಡೆದಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ
ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ಸೆಪ್ಟೆಂಬರ್ 2 ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿ, ಸನಾತನ (Sanatana) ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ಮಾತ್ರ ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು – ವಂದೇ ಭಾರತ್ ರೈಲು ತುರ್ತು ನಿಲುಗಡೆ
ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಆಡಳಿತಾರೂಢ ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮೋದಿ
Web Stories