ಚೆನ್ನೈ: ಅತಿ ಕಿರಿಯ ವಯಸ್ಸಿನಲ್ಲೇ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ (World Chess Champion) ಆಗಿ ಹೊರಹೊಮ್ಮಿದ ಡಿ.ಗುಕೇಶ್ (D.Gukesh) ಐತಿಹಾಸಿಕ ಸಾಧನೆ ಗುರುತಿಸಿ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ (M.K.Stalin) ಅವರು 5 ಕೋಟಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
18ರ ಹರೆಯದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ – 18ನೇ ವಯಸ್ಸಿಗೆ ಸಾಧನೆ
Advertisement
Advertisement
ಗುಕೇಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಸ್ಟಾಲಿನ್, ಈ ಪ್ರಶಸ್ತಿಯು ಇಷ್ಟು ಚಿಕ್ಕ ವಯಸ್ಸಿನಲ್ಲಿ ಗುಕೇಶ್ ಅವರ ಅದ್ಭುತ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ತಮಿಳುನಾಡಿನ ಪ್ರತಿಭೆಯ ಗೆಲುವು ಜಾಗತಿಕ ಚೆಸ್ ಕಣದಲ್ಲಿ ಭಾರತದ ಹೆಮ್ಮೆಯ ಪರಂಪರೆಯನ್ನು ಮುಂದುವರಿಸಿದೆ ಎಂದು ಬಣ್ಣಿಸಿದ್ದಾರೆ.
Advertisement
Advertisement
ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಅವರ ಸಾಧನೆಯನ್ನು ಗೌರವಿಸಲು, ನಾನು 5 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಲು ಸಂತೋಷಪಡುತ್ತೇನೆ. ಅವರ ಐತಿಹಾಸಿಕ ಗೆಲುವು ರಾಷ್ಟ್ರಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷ ತಂದಿದೆ. ಅವರು ಮುಂದೆಯೂ ಮಿಂಚಲಿ ಮತ್ತು ಭವಿಷ್ಯದಲ್ಲಿ ಎತ್ತರಕ್ಕೆ ಏರಲಿ ಎಂದು ಸಿಎಂ ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೂ ಮೊದಲೇ ಚಾಂಪಿಯನ್ಸ್ ಟ್ರೋಫಿ ಬಾಯ್ಕಾಟ್ ಮಾಡ್ಬೇಕು – ಪಾಕ್ ಹೊಸ ಕ್ಯಾತೆ