– ಮೂರು ವಾರಗಳ ನಿರಂತರ ಹೋರಾಡಿ ಕೇಸ್ ದಾಖಲಿಸಿದ ವಿದ್ಯಾರ್ಥಿಗಳು
ಚೆನ್ನೈ: ನಾಯಿ ಮರಿಯೊಂದನ್ನು ನಿರ್ದಯವಾಗಿ ಎಸೆದಿದ್ದ ದಿನಸಿ ಅಂಗಡಿ ಮಾಲೀಕನ ವಿರುದ್ಧ ಎಫ್‍ಐಆರ್ ದಾಖಲಿಸುವಲ್ಲಿ ತಿರುಚ್ಚಿಯ ತಮಿಳುನಾಡು ಕಾನೂನು ಕಾಲೇಜು ವಿದ್ಯಾರ್ಥಿಗಳು ಯಶ್ವಸಿಯಾಗಿದ್ದಾರೆ.
ಚೆನ್ನೈನ ಮನಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಮುರುಗನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮುರುಗನ್ ಬೇಲ್ ಪಡೆದು ಹೊರಬಂದಿದ್ದಾನೆ. ಈ ಮೂಲಕ ಕಾನೂನು ವಿದ್ಯಾರ್ಥಿಗಳು ಮೂರು ವಾರ ಹೋರಾಡಿ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಏನಿದು ಪ್ರಕರಣ?:
ದುರ್ಗಾಯ್ ಅವೆನ್ಯೂ ರಸ್ತೆಯಲ್ಲಿ ಡಿಸೆಂಬರ್ 1ರಂದು ಘಟನೆ ನಡೆದಿದ್ದು, ಅಂದು ಆರೋಪಿ ಬಾಲಮುರುಗನ್ ತನ್ನ ಬೈಕ್ ಬಳಿ ನಿಂತಿರುತ್ತಾನೆ. ಈ ವೇಳೆ ನಾಯಿಯೊಂದನ್ನು ನಾಯಿಮರಿ ಹಿಂಬಾಲಿಸುತ್ತಿರುತ್ತದೆ. ತನ್ನ ಬಳಿಗೆ ನಾಯಿಮರಿ ಬರುತ್ತಿದ್ದಂತೆ, ಮುದ್ದಾಡಿ ಕರೆದಂತೆ ನಟಿಸಿದ ಆರೋಪಿ ಅದನ್ನು ಎತ್ತಿಕೊಂಡ ಜೋರಾಗಿ ರಸ್ತೆಯ ಮೇಲೆ ಎಸೆಯುತ್ತಾನೆ. ನೆಲಕ್ಕೆ ಅಪ್ಪಳಿಸಿದ ನಾಯಿ ನೋವಿನಿಂದ ಅರಚುತ್ತದೆ. ಈ ಶಬ್ದ ಕೇಳಿಸಿಕೊಂಡ ಕೆಲವು ನಾಯಿಗಳು ಸ್ಥಳಕ್ಕೆ ನಾಯಿ ಮರಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತವೆ.
Advertisement
ಬಾಲಮುರುಗನ್ ಕೃತ್ಯವು ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ನೋಡಿದ್ದ ವಿದ್ಯಾರ್ಥಿನಿಯೊಬ್ಬಳು ಕಸ್ತೂರಿ ರಾಜಮಣಿ ಹಾಗೂ ಆಕೆಯ ಐವರು ಸಹಪಾಠಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಎಲ್ಲರು ಸೇರಿ ಡಿಸೆಂಬರ್ 14 ರಂದು ಎಂ6 ಮನಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ಪಡೆದಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು.
Advertisement
Advertisement
ಪೊಲೀಸರು ನಿಷ್ಕಾಳಜಿ ತೊರಿದ್ದರಿಂದ ಡಿಸೆಂಬರ್ 13ರಂದು ಕಾನೂನು ವಿದ್ಯಾರ್ಥಿಗಳು ಬ್ಯೂವ್ ಕ್ರಾಸ್ ಸಂಘಟನೆಗೆ ವಿಡಿಯೋ ನೀಡಿದ್ದರು. ಬಳಿಕ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಭೇಟಿ ಮಾಡಿದ್ದರೂ, ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಎಲ್ಲ ಬೆಳವಣಿಗೆ ಬಳಿಕ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾಗಿ ಮನಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಂತೆ.
ಗಂಭೀರವಾಗಿ ಗಾಯಗೊಂಡಿರುವ ನಾಯಿಮರಿ ಚೇತರಿಸಿಕೊಳ್ಳುತ್ತಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಸನ್ 428 (ಪ್ರಾಣಿಯ ಮೇಲೆ ಹಲ್ಲೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆದರೆ ಬೇಲ್ ಪಡೆದು ಆರೋಪಿ ಬಾಲಮುರುಗನ್ ಹೊರಬಂದಿದ್ದಾನೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv