ಚೆನ್ನೈ: ತಮಿಳುನಾಡು (Tamil Nadu) ಬಿಎಸ್‌ಪಿ (BSP) ಮುಖ್ಯಸ್ಥನ ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ನಿನ್ನೆ ಸಂಜೆ ಚೆನ್ನೈನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಬಿಎಸ್‌ಪಿಯ ಕೆ.ಆರ್ಮ್‌ಸ್ಟ್ರಾಂಗ್ (K.Armstrong) ಹತ್ಯೆಯಾಗಿತ್ತು. ಪ್ರಕರಣದ ಆರೋಪಿ ತಿರುವೆಂಗಡಂ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದವ. ಚೆನ್ನೈನ ಮಾಧವರಂ ಬಳಿ ಶನಿವಾರ ಪೊಲೀಸರು ಎನ್‌ಕೌಂಟರ್ ನಡೆಸಿದ್ದರು. ಇದನ್ನೂ ಓದಿ: ಬಿಎಸ್‌ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ- 8 ಮಂದಿ ಪೊಲೀಸ್ ವಶಕ್ಕೆ
ಜು.11 ರಂದು ಐದು ದಿನಗಳ ಕಾಲ ಆರೋಪಿಯನ್ನು ಸೆಂಬಿಯಂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ವಿಚಾರಣೆಗಾಗಿ ಪರಂಗಿಮಲೈ ಸಶಸ್ತ್ರ ಮೀಸಲು ಠಾಣೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ. ಆಗ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದ ತಿರುವೆಂಗಡಂನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದ ಎನ್ನಲಾಗಿದೆ.
ತಿರುವೆಂಗಡಂ ಕೊಲೆಗೂ ಮುನ್ನ ಬಿಎಸ್‌ಪಿ ನಾಯಕನ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿದ್ದ. ಹಲವು ದಿನಗಳ ಕಾಲ ಆರ್ಮ್‌ಸ್ಟ್ರಾಂಗ್‌ನನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 11 ಶಂಕಿತರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತಮಿಳುನಾಡಿನ ಬಿಎಸ್‌ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ!
ಕೆ.ಆರ್ಮ್‌ಸ್ಟ್ರಾಂಗ್ ಅವರನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿರುವ ಅವರ ಮನೆಯ ಸಮೀಪ ಆರು ಮಂದಿ ಬೈಕ್‌ನಲ್ಲಿ ಬಂದವರು ಹತ್ಯೆ ಮಾಡಿದ್ದರು. ಆರ್ಮ್‌ಸ್ಟ್ರಾಂಗ್ ಅವರು ನಗರದ ಸೆಂಬಿಯಂ ಪ್ರದೇಶದಲ್ಲಿನ ಅವರ ಮನೆಯ ಬಳಿ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ, ಕೆಲವರು ಆತನ ಮೇಲೆ ಹಲ್ಲೆ ನಡೆಸಿ ನಂತರ ಪರಾರಿಯಾಗಿದ್ದರು. ಕುಟುಂಬದವರು ಆರ್ಮ್‌ಸ್ಟ್ರಾಂಗ್‌ನನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಮೃತಪಟ್ಟಿದ್ದರು.