ಚೆನ್ನೈ: ಅಂತೂ ಇಂತು ಅಕ್ರಮ ಹಣ ಸಂಪಾದನೆ ಕೇಸ್‍ನಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಆಕೆಯ ಸಂಬಂಧಿಗಳಾದ ಇಳವರಸಿ ಮತ್ತು ಸುಧಾಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಯ್ತು. ಆದ್ರೆ ತಮಿಳುನಾಡಿನಲ್ಲಿ ಇಷ್ಟು ದಿನ ನಡೆದ ರಾಜಕೀಯ ಹೈಡ್ರಾಮ ಮತ್ತಷ್ಟು ಚುರುಕಾಗುವ ಲಕ್ಷಣ ಕಂಡುಬರುತ್ತಿದೆ.
ಶಶಿಕಲಾ ಬೆಂಗಳೂರಿನ ಜೈಲು ಹಕ್ಕಿ ಆಗ್ತಿದ್ದ ಹಾಗೆ ಅತ್ತ ಚೆನ್ನೈನಲ್ಲಿ ರಾಜಕೀಯ ಗರಿಗೆದರಿದೆ. ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. ಆದ್ರೆ ಹೊಸದಾಗಿ ಶಾಸಕರ ಪಟ್ಟಿ ಕೊಡುವಂತೆ ಗವರ್ನರ್ ತಾಕೀತು ಮಾಡಿದ್ರು.
Advertisement
ಒಂದು ಕಡೆ ಇಷ್ಟೆಲ್ಲಾ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ರೆ, ಅತ್ತ ಪನ್ನೀರ್ ಸೆಲ್ವಂ ಕೂಡ ತಮ್ಮದೇ ಲೆಕ್ಕಾಚಾರದಲ್ಲಿ ದಾಳ ಉರುಳಿಸುತ್ತಿದ್ದಾರೆ. ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಅವಕಾಶ ಕೊಡುವಂತೆ ಕೋರಿದ್ದಾರೆ. ಜಯಾ ಸೋದರ ಸಂಬಂಧಿ ದೀಪಾ ಬೆಂಬಲ ಪಡೆದಿರುವ ಸೆಲ್ವಂ ಜೊತೆ 22 ಶಾಸಕರಿದ್ದಾರೆ ಎನ್ನಲಾಗಿದೆ.
Advertisement
ಶಶಿಕಲಾ ಎಂಎಲ್‍ಎಗಳನ್ನು ಒತ್ತಡದಿಂದ ಕೂಡಿ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗೋಲ್ಡನ್ ಬೇ ರೆಸಾರ್ಟ್‍ನಿಂದ ಎಲ್ಲರನ್ನು ಖಾಲಿ ಮಾಡಿಸಿದ್ದು, ಕೆಲವರನ್ನು ವಿಚಾರಣೆ ಕೂಡ ಮಾಡ್ತಿದ್ದಾರೆ. ಅದ್ರಲ್ಲಿ ಯಾರಾದರೂ ಒಂದಿಬ್ಬರು ಹೌದು ಕೂಡಿ ಹಾಕಿದ್ರು ಅಂತಾ ಹೇಳಿದ್ರೆ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಪಳನಿಸ್ವಾಮಿ ವಿರುದ್ಧವೇ ಕಿಡ್ನಾಪ್ ಕೇಸ್ ಬೀಳುವ ಸಾಧ್ಯತೆಯೂ ಇದೆ.
Advertisement
ಒಟ್ನಲ್ಲಿ ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗ ಇದ್ದ ಸ್ಥಿತಿ ಮಧ್ಯಾಹ್ನಕ್ಕೆ ಇಲ್ಲದಂತೆ ಆಗುತ್ತಿದೆ. ಪನ್ನೀರ್ ಸೆಲ್ವಂಗೆ ಕುರ್ಚಿ ಸಿಗುತ್ತೋ ಇಲ್ಲಾ ಪಳನಿಸ್ವಾಮಿ ಸಿಎಂ ಆಗ್ತಾರೋ ಅನ್ನೋದ್ರ ಜೊತೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಾ ಅನ್ನೋದು ಕೂಡ ಅಷ್ಟೇ ಮುಖ್ಯವಾಗಿದೆ.
Advertisement