ತಮಿಳಿನ ’96’ ಸಿನಿಮಾ ( 96 Film) ಮೂಲಕ ಮೋಡಿ ಮಾಡಿದ್ದ ಆದಿತ್ಯ ಭಾಸ್ಕರ್ (Adithya Bhaskar) ಮತ್ತು ಗೌರಿ ಜಿ. ಕಿಶನ್ (Gouri G. Kishan) ಮದುವೆ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 96 ಸಿನಿಮಾದಲ್ಲಿ ವಿಜಯ್ ಸೇತುಪತಿ (Vijay Sethupathi)- ತ್ರಿಶಾ (Trisha) ಜೋಡಿಯಾಗಿ ನಟಿಸಿದ್ದರು. ಅವರ ಬಾಲ್ಯದ ಪಾತ್ರವನ್ನು ಇವರು ನಿಭಾಯಿಸಿದ್ದರು. ಇದೀಗ ಇಬ್ಬರೂ ಹಸೆಮಣೆ ಮೇಲೆ ಕುಳಿತಿರುವ ಫೋಟೋ ಸದ್ದು ಮಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಮದುವೆಯ ಫೋಟೋಗಳನ್ನು ಶೇರ್ ಮಾಡಿರುವ ನಟಿ ಗೌರಿ, ಹರಿದಾಡುತ್ತಿರುವ ವದಂತಿಗಳಿಗೆ ಉತ್ತರ ನೀಡಿದ್ದಾರೆ. ನಟಿ ಗೌರಿ ಮತ್ತು ಆದಿತ್ಯ ಭಾಸ್ಕರ್ ’96’ ಸಿನಿಮಾ ಬಳಿಕ ‘ಹಾಟ್‌ಸ್ಪಾಟ್’ (Hotspot Film) ಹೆಸರಿನ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಮಾ.29ರಂದು ತೆರೆಕಂಡಿದೆ. ಈ ಸಿನಿಮಾ ಪ್ರಚಾರದ ನಿಮಿತ್ತ, ಸಿನಿಮಾದಲ್ಲಿನ ಮದುವೆ ದೃಶ್ಯದ ಮೇಕಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳನ್ನು ನೋಡಿದ ಅವರ ಫ್ಯಾನ್ಸ್ ಈ ಜೋಡಿ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂದೇ ಊಹಿಸಿದ್ದರು. ಯಾವುದೇ ಆಡಂಬರವಿಲ್ಲದೆ ರೇಷ್ಮೆ ಪಂಚೆ ಅಂಗಿಯಲ್ಲಿ ಆದಿತ್ಯ ಭಾಸ್ಕರ್ ಕಂಡರೆ, ಹಸಿರು ಬಣ್ಣದ ಸೀರೆಯಲ್ಲಿ ಗೌರಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು
ಈ ಸಿನಿಮಾ ಬಳಿಕ ಒಂದಾದ ಮೇಲೊಂದು ಸಿನಿಮಾಗಳಲ್ಲಿ ಗೌರಿ ಬಿಜಿಯಾಗಿದ್ದಾರೆ. ತಮಿಳು ಮಾತ್ರವಲ್ಲ ತೆಲುಗಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿತ್ಯಾ ಸಹ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ.