ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ (Gautham Vasudev Menon) ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡುವ ಪ್ಲ್ಯಾನ್ ಅನ್ನು ನಿರ್ದೇಶಕ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಜೊತೆ ನಟಿಸಲು ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ಸಂಭಾವನೆ
ಸಂದರ್ಶನವೊಂದರಲ್ಲಿ ಡೈರೆಕ್ಟರ್ ಗೌತಮ್ ಮಾತನಾಡಿ, ಈ ವರ್ಷ ನಾನು ಕನ್ನಡ ಸಿನಿಮಾ ಮಾಡುವ ಆಲೋಚನೆ ಹೊಂದಿದ್ದೇನೆ. ದೊಡ್ಡ ಸಿನಿಮಾ ನಿರ್ಮಿಸುವ ಪ್ಲ್ಯಾನ್‌ಯಿದೆ ಎಂದಿದ್ದಾರೆ. ದಕ್ಷಿಣದ ಜೊತೆಗೆ ಬಾಲಿವುಡ್‌ನಲ್ಲೂ ನಾನು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ಭಾಷೆಯ ಗಡಿ ದಾಟಲು ಇಷ್ಟಪಡುತ್ತೇನೆ. ಈಗ ನಾನು ಕನ್ನಡದಲ್ಲಿ ಸಿನಿಮಾ ಮಾಡಲು ಗುರಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.
ಕನ್ನಡ ನಾನು ಮಾತನಾಡುವ ಭಾಷೆಯಲ್ಲ. ಆದರೆ ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಸಿನಿಮಾ ಮಾಡುವ ಸವಾಲನ್ನು ಸ್ವೀಕರಿಸಲು ರೆಡಿಯಾಗಿದ್ದೇನೆ ಎಂದು ಕನ್ನಡ ಸಿನಿಮಾ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ಯಾಂಡಲ್‌ವುಡ್‌ನ ಯಾವ ನಟರೊಂದಿಗೆ ಅವರು ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಅಂದಹಾಗೆ, ನಾಗಚೈತನ್ಯ ಮತ್ತು ಸಮಂತಾ ನಟಿಸಿದ ಯೇ ಮಾಯಾ ಚೇಸಾವೆ, ಎಕ್ ದಿವಾನಾ ಥಾ, ಕುಟ್ಟಿ ಸ್ಟೋರಿ ಸೇರಿದಂತೆ ಬಹುಭಾಷೆಗಳಲ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿಯಾನ್ ವಿಕ್ರಮ್ ನಟನೆಯ ಹೊಸ ಸಿನಿಮಾಗೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನ ಮಾಡಿದ್ದಾರೆ. ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.