ಬೆಂಗಳೂರು: ತಮಿಳುನಾಡಿನ ಧರ್ಮಪುರಿಯಲ್ಲಿ ಕನ್ನಡ ಬಾವುಟ ಹಾಕಿದಕ್ಕೆ ರಾಜ್ಯದ ವಾಹನ ಚಾಲಕನ ಮೇಲೆ ಹಲ್ಲೆ ನಡೆದಿತ್ತು. ಇದರಿಂದ ರೊಚ್ಚಿಗೆದ್ದ ಕನ್ನಡಿಗರು, ಎಲ್ಲ ಕಡೆ ತಮಿಳು ಭಾಷಿಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸರ್ಜಾಪುರದ ತಮಿಳು ಭಾಷಿಕರು ತಮಿಳುನಾಡಿನ ಸ್ಥಳೀಯ ಚುನಾವಣೆಗೆ ಆಟೋಗೆ ಬ್ಯಾನರ್ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದರು. ಇದನ್ನು ನೋಡಿದ ಯುವಕ ವಸಂತ್ ಪೂಜಾರಿ, ಆಟೋ ಚಾಲಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ತಮಿಳುನಾಡಿನ ಚುನಾವಣೆಗೆ ತಮಿಳು ಭಾಷೆಯಲ್ಲಿ ಪ್ರಚಾರ ಮಾಡುತ್ತಿದ್ದೀರಾ, ಎಂದು ಪ್ರಶ್ನಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ಕನ್ನಡದ ಬಾವುಟ ಹಾಕಿಕೊಂಡು ತಮಿಳುನಾಡಿಗೆ ಪ್ರವೇಶಿಸಿದ್ದಕ್ಕೆ ನಮ್ಮ ರಾಜ್ಯದ ಚಾಲಕರ ಮೇಲೆ ಹಲ್ಲೆ ಮಾಡಲಾಗಿದೆ. ಹೀಗಿರುವಾಗ ನೀವು ತಮಿಳಿನಲ್ಲಿ ಪ್ರಚಾರ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ, ನೀವು ಬೇಕಾದರೆ ತಮಿಳುನಾಡಿಗೆ ಹೋಗಿ ಅಲ್ಲಿ ತಮಿಳಿನಲ್ಲಿ ಪ್ರಚಾರ ಮಾಡಿ, ಆದರೆ ಇಲ್ಲಿ ತಮಿಳಿನಲ್ಲಿ ಪ್ರಚಾರ ಮಾಡಬೇಡಿ. ಪ್ರಚಾರದ ತಮಿಳು ಬ್ಯಾನರ್ ತೆಗೆದು ಹಾಕಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದದ ನಂತರ ಕೊನೆಗೆ ವಸಂತ್ ಪೂಜಾರ್ ಮಾತಿಗೆ ಸಮ್ಮತಿಸಿದ ಆಟೋ ಚಾಲಕರು, ಆಟೋಗಳ ಮೇಲೆ ಹಾಕಿದ್ದ ತಮಿಳಿನ ಎಲ್ಲ ಬ್ಯಾನರ್ ಗಳನ್ನು ತೆಗೆದು ಹಾಕಿದ್ದಾರೆ.