ನಟ ಕಮ್ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ (G.V Prakash) ಜೊತೆ ದಿವ್ಯಾ ಭಾರತಿ (Divya Bharathi) ಡೇಟಿಂಗ್ ಬಗ್ಗೆ ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ದಿವ್ಯಾ ರಿಯಾಕ್ಟ್ ಮಾಡಿದ್ದಾರೆ. ಮದುವೆ ಆದ ವ್ಯಕ್ತಿಯೊಡನೆ ನಾನೇಕೆ ಸುತ್ತಲಿ, ಇದೊಂದು ಸುಳ್ಳು ವದಂತಿ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ
ನನ್ನ ಹೆಸರನ್ನು ಖಾಸಗಿ ಕುಟುಂಬದ ವಿಚಾರಕ್ಕೆ ಅನಗತ್ಯವಾಗಿ ಎಳೆದು ತರಲಾಗಿದೆ. ಜಿ.ವಿ ಪ್ರಕಾಶ್ ಅವರ ಕೌಟುಂಬಿಕ ಸಮಸ್ಯೆಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ನಟರೊಂದಿಗೆ ಡೇಟಿಂಗ್ ಮಾಡುವುದಿಲ್ಲ. ಅದರಲ್ಲೂ ವಿವಾಹ ಆದವನೊಂದಿಗೆ ಸುತ್ತಾಡಲ್ಲ ಎಂದು ಖಡಕ್ ಆಗಿ ನಟಿ ಹೇಳಿದ್ದಾರೆ. ಇದನ್ನೂ ಓದಿ:‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್
ಇಂತಹ ವಿಚಾರಗಳಿಗೆ ಗಮನ ಕೊಡುವುದು ಬೇಡ ಎಂದು ನಾನು ಭಾವಿಸಿ ಸುಮ್ಮನಿದ್ದೆ, ಆದರೀಗ ಎಲ್ಲವೂ ಮಿತಿ ಮೀರಿದೆ. ನಾನು ಸ್ವಾವಲಂಬಿ ಮಹಿಳೆ, ಈ ರೀತಿ ನಿಜವಲ್ಲದ ಆರೋಪಗಳಿಗೆ ನನ್ನ ಇಮೇಜ್ ಹಾಳಾಗಲು ನಾನು ಬಿಡುವುದಿಲ್ಲ. ಹೀಗೆ ನೆಗೆಟಿವಿ ಹರಡುವ ಬದಲು ಉತ್ತಮ ಜಗತ್ತನ್ನು ನಿರ್ಮಿಸುವತ್ತ ಗಮನ ಹರಿಸೋಣ. ಈ ವಿಚಾರದ ಬಗ್ಗೆ ಇದೇ ನನ್ನ ಮೊದಲ ಹಾಗೂ ಕಡೆಯ ಪ್ರತಿಕ್ರಿಯೆ ಎಂದು ನಟಿ ಬರೆದುಕೊಂಡಿದ್ದಾರೆ.
View this post on Instagram
2021ರಲ್ಲಿ ‘ಬ್ಯಾಚುಲರ್’ ಸಿನಿಮಾದಲ್ಲಿ ಜಿ.ವಿ ಪ್ರಕಾಶ್ ಮತ್ತು ದಿವ್ಯಾ ಭಾರತಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ ಇಬ್ಬರ ನಡುವೆ ಲವ್ವಿ ಡವ್ವಿ ಇದೆ ಎಂದೇ ಸುದ್ದಿ ಹಬ್ಬಿತ್ತು. ಈ ವಿಚಾರ ಸುಳ್ಳು ಇಬ್ಬರೂ ಈ ಮೊದಲೇ ತಿರಸ್ಕರಿಸಿದ್ದರು. ಬಳಿಕ ಕಳೆದ ವರ್ಷ ಸೈಂಧವಿ ಜೊತೆ ಜಿ.ವಿ ಪ್ರಕಾಶ್ ಡಿವೋರ್ಸ್ ಘೋಷಿಸಿದ್ದರು. 10 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ಬೆನ್ನಲ್ಲೇ ಮತ್ತೆ ದಿವ್ಯಾ ಮತ್ತು ಪ್ರಕಾಶ್ ಡೇಟಿಂಗ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಅದಕ್ಕೆಲ್ಲಾ ನಟಿ ಈಗ ತಕ್ಕ ಉತ್ತರ ಕೊಟ್ಟಿದ್ದಾರೆ.