CinemaLatestLeading NewsMain PostSouth cinema

ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

ರಡು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿರುವ ಹಿಂದಿ ಸಿನಿಮಾ ‘ಸಿಯಾ’ದ ನಾಯಕಿ ಹಾಗೂ ತಮಿಳು ಚಿತ್ರ ರಂಗದ ನಟಿ ಆಕಾಂಕ್ಷಾ ಮೋಹನ್ (Akanksha Mohan), ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೆಪ್ಟಂಬರ್ 28 ರಂದು ರೂಮ್ ಪಡೆದಿದ್ದ ಇವರು, ಸೆ.30 ರಂದು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಶವ ಸಿಕ್ಕ ರೂಮ್ ನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು ತನ್ನ ಸಾವಿಗೆ ತಾನೇ ಕಾರಣ ಎಂದು ಅದರಲ್ಲಿ ಬರೆದಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ಸೆ.28 ರಂದು ಬುಧವಾರ ಬೆಳಗ್ಗೆ ಆಕಾಂಕ್ಷಾ ರೂಮ್ ಬುಕ್ ಮಾಡಿದ್ದಾರೆ. ಎರಡು ದಿನಗಳವರೆಗೂ ಅವರು ರೂಮ್ (Lodge) ಬುಕ್ ಮಾಡಿದ್ದು, ಎರಡು ದಿನಗಳ ಬಳಿಕವೂ ರೂಮ್ ಬಾಗಿಲು ತೆರೆಯದೇ ಇರುವ ಕಾರಣಕ್ಕಾಗಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಬಂದ ಬಳಿಕೆ ಬಾಗಿಲು ತೆರೆದರು ಆಕಾಂಕ್ಷಾ ಬಾಡಿ ಪತ್ತೆಯಾಗಿದೆ. ಅಲ್ಲಿಯೇ ಇದ್ದ ಡೆತ್ ನೋಟ್ ನಲ್ಲಿ ನನಗೆ ನೆಮ್ಮದಿ ಬೇಕು. ಹಾಗಾಗಿ ಸಾಯುತ್ತಿದ್ದೇನೆ. ನನ್ನ ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣವಲ್ಲ’ ಎಂದು ಬರೆದಿದ್ದಾರೆ.

ಮುಂಬೈ (Mumbai) ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರದ ಸೊಸೈಟಿಯಲ್ಲಿ ಆಕಾಂಕ್ಷಾ ಒಂಟಿಯಾಗಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಮಾನಸಿಕ ಖಿನ್ನತೆಗೂ ಅವರು ಒಳಗಾಗಿದ್ದರಂತೆ. ಈ ಕಾರಣದಿಂದಾಗಿಯೇ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

ತಮಿಳಿನ (Kollywood) ‘9 ಥಿರದರ್ಗಳ್’ ಸಿನಿಮಾದ ಮೂಲಕ ಕಾಲಿವುಡ್ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದ ಆಕಾಂಕ್ಷಾ ಮೋಹನ್, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲ ಮಾಡೆಲಿಂಗ್ ಕ್ಷೇತ್ರದಲ್ಲೂ ಇವರು ತಮ್ಮದೇ ಆದ ಹೆಸರು ಮಾಡಿದ್ದಾರೆ. ದುಡುಕಿನ ಕಾರಣದಿಂದಾಗಿ ಕೇವಲ 30 ವರ್ಷದಲ್ಲಿ ಬದುಕು ಮುಗಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button