ಸರಳವಾಗಿ ನಡೆಯಿತು ತಮಿಳು ನಟ ವಿವೇಕ್ ಪುತ್ರಿ ಮದುವೆ

Public TV
1 Min Read
vivek

ಕಾಲಿವುಡ್‌ನ (Kollywood) ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿರುವ ತಮಿಳಿನ ಹಾಸ್ಯ ನಟ ವಿವೇಕ್ (Actor Vivek) ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರತ್ ಎಂಬುವವರ ಜೊತೆ ಸರಳವಾಗಿ ವಿವೇಕ್ ಪುತ್ರಿ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ರುಚಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಓರ್ರಿ

tejaswini vivek

ಮಾ.28ರಂದು ಭರತ್ ಎಂಬುವವರ ಜೊತೆ ವಿವೇಕ್ ಪುತ್ರಿ ತೇಜಸ್ವಿನಿ ಚೆನ್ನೈನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನಟ ವಿವೇಕ್ ಅವರು ಪರಿಸರ ಪ್ರೇಮಿಯಾಗಿದ್ದರು. ತಂದೆಯ ಆಸೆಯಂತೆಯೇ ಮದುವೆಯ ದಿನ ತೇಜಸ್ವಿನಿ (Tejaswini) ಗಿಡ ನೆಟ್ಟಿದ್ದಾರೆ. ಅದಷ್ಟೇ ಅಲ್ಲ, ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ:250 ಕೋಟಿ ಮೌಲ್ಯದ ಬಂಗಲೆಗೆ ಒಡತಿಯಾದ ರಣ್‌ಬೀರ್, ಆಲಿಯಾ ಭಟ್ ಪುತ್ರಿ

viveke 1

ವಿವೇಕ್ ಅವರು ಕೇವಲ ನಟನಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಪ್ರಗತಿಪರ ಚಿಂತನೆಗಳನ್ನ ಹಾಸ್ಯದ ಮೂಲಕ ಹೇಳುತ್ತಿದ್ದರು ವಿವೇಕ್. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಆತ್ಮೀಯರಾಗಿದ್ದ ಪದ್ಮಶ್ರೀ ಪುರಸ್ಕ್ರತ ನಟ ವಿವೇಕ್ ಹಸಿರನ್ನು ಬೆಳೆಸಬೇಕು. ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಲಾಂ ಅವರು ಹೇಳುತ್ತಿದ್ದ ಮಾತನ್ನ ಗಂಭೀರವಾಗಿ ತೆಗೆದುಕೊಂಡು ತಮ್ಮ ಮಗನ ಹೆಸರಲ್ಲಿ ಸಾಯಿಪ್ರಸನ್ನ ಟ್ರಸ್ಟ್ ಸ್ಥಾಪಿಸಿ ಅದರಲ್ಲಿ ‘ಗ್ರೀನ್ ಕಲಾಂ’ ಎನ್ನುವ ಯೋಜನೆ ರೂಪಿಸಿದ್ದರು. ಗಿಡ ನೆಡಲು ಶುರು ಮಾಡಿದ್ದರು. ಅನೇಕ ಹಾನಿಗೊಳಗಾದ ಮರಗಳನ್ನು ಕೂಡ ರಕ್ಷಿಸಿದರು ವಿವೇಕ್.

ಅಂದಹಾಗೆ, ವಿವೇಕ್ ಅವರು 1980ರಲ್ಲಿ ‘ಬಾಲಚಂದರ್’ (Balachandar) ಸಿನಿಮಾ ಮೂಲಕ ಕಾಲಿವುಡ್‌ಗೆ (Kollywood) ಎಂಟ್ರಿ ಕೊಟ್ಟರು. ನಿರ್ದೇಶಕ ಕೆ.ಬಾಲಚಂದರ್ ಅವರು ವಿವೇಕ್‌ರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದರು.

Share This Article