ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

Public TV
1 Min Read
Dhanshika vishal

ಕಾಲಿವುಡ್ ನಟ ವಿಶಾಲ್ (Vishal) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯೋಗಿದ’ ಚಿತ್ರದ ನಟಿ ಸಾಯಿ ಧನ್ಶಿಕಾ (Sai Dhanshika) ಜೊತೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಈ ಮದುವೆ ಬಗ್ಗೆ ಅಧಿಕೃತವಾಗಿ ಧನ್ಶಿಕಾ, ವಿಶಾಲ್ ಇಬ್ಬರೂ ಅನೌನ್ಸ್ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಮದುವೆ ಆಗೋದಾಗಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

vishal Dhanshikaಕಳೆದ 15 ವರ್ಷಗಳಿಂದ ಪರಿಚಿತರಾಗಿರುವ ಧನ್ಶಿಕಾ ಜೊತೆ ವಿಶಾಲ್ ಮದುವೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ನಡೆದ ಧನ್ಶಿಕಾ ನಟನೆಯ ‘ಯೋಗಿದ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್, ನನಗೆ ಧನ್ಶಿಕಾ ಜೊತೆ ಮದುವೆ ಫಿಕ್ಸ್ ಆಗಿದೆ. ಅವರ ತಂದೆ ಕೂಡ ಇಲ್ಲಿಯೇ ಇದ್ದಾರೆ. ಅವರ ಆಶೀರ್ವಾದೊಂದಿಗೆ ನಾನು ಅವಳನ್ನು ಪರಿಚಯಿಸುತ್ತಿದ್ದೇನೆ. ಧನ್ಶಿಕಾ ಅದ್ಭುತ ನಟಿ. ಮದುವೆ ಬಳಿಕವೂ ಆಕೆ ನಟನೆ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

ಬಳಿಕ ಸಾಯಿ ಧನ್ಶಿಕಾ ಮಾತನಾಡಿ, ನಮ್ಮ ಮದುವೆ ವಿಷಯ ಈಗಲೇ ತಿಳಿಸಬಾರದು ಅಂದುಕೊಂಡಿದ್ದೇವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದ ನ್ಯೂಸ್ ವೈರಲ್ ಆಗುತ್ತಿದೆ. ಹೀಗಾಗಿ ಈಗಲೇ ಮದುವೆ ದಿನಾಂಕ ಕೂಡ ಘೋಷಣೆ ಮಾಡುತ್ತೇವೆ. ಕಳೆದ 15 ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಇದೆ. ನಡಿಗರ್ ಸಂಘದ ಕಟ್ಟಡ ಆ.15ರಂದು ಉದ್ಘಾಟನೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಬಳಿಕ ಆಗಸ್ಟ್ 29ರಂದು ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದ್ದಾರೆ.

vishal Dhanshika 1ಆಗಸ್ಟ್‌ 29ರಂದು ವಿಶಾಲ್ ಅವರ ಹುಟ್ಟುಹಬ್ಬ. ಅದೇ ದಿನ ವಿವಾಹ ನಿಶ್ಚಯ ಮಾಡಲಾಗಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article