ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಸದ್ಯ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರದ ಶೂಟಿಂಗ್‌ನಲ್ಲಿ ಅವರು ನಿರತರಾಗಿದ್ದಾರೆ. ವಿಜಯ್ ನಟನೆಯ 69ನೇ (Vijay Thalapathy 69th Film) ಚಿತ್ರದ ಅಪ್‌ಡೇಟ್ ಏನು? ಶೂಟಿಂಗ್ ಶುರುವಾಗೋದು ಯಾವಾಗ? ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್.
ವಿಜಯ್ ತಮ್ಮ 69ನೇ ಚಿತ್ರಕ್ಕೆ ಡೈರೆಕ್ಟರ್ ವಿನೋತ್ ಜೊತೆ ಕೈಜೋಡಿಸಿದ್ದಾರೆ. ಜೂನ್ 22ರಂದು ವಿಜಯ್ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ಸಿಗಲಿದ್ದು, ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಇದನ್ನೂ ಓದಿ:‘ಟಿಲ್ಲು ಸ್ಕ್ವೇರ್’ ಸಕ್ಸಸ್ ಬಳಿಕ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್

ವಿಜಯ್ ನಟನೆಯ 68ನೇ ಸಿನಿಮಾ `ಗೋಟ್’ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆಕಾಣಲಿದೆ.


