ಶಿವಮೊಗ್ಗ ಜೈಲಿಗೆ ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್

Public TV
1 Min Read
vijay

ಶಿವಮೊಗ್ಗ: ತಮಿಳಿನ ಸೂಪರ್ ಸ್ಟಾರ್ ವಿಜಯ್ ಸದ್ಯ ‘ಬಿಗಿಲ್’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದು, ಅವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ. ಅದರಂತೆ ಸೂಪರ್ ಸ್ಟಾರ್ ನಟ ವಿಜಯ್ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ.

ವಿಜಯ್ ಅವರ ಮುಂದಿನ ಸಿನಿಮಾ ‘ದಳಪತಿ-64’ ಸಿನಿಮಾದ ಶೂಟಿಂಗ್‍ಗಾಗಿ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ಶಿವಮೊಗ್ಗದ ಜೈಲು ಕೊರಿಯನ್ ಮಾದರಿ ಜೈಲಾಗಿದ್ದು, ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದೆ. ಹೀಗಾಗಿ ಈ ಜೈಲಿನಲ್ಲಿ ಆಗಾಗ ಸಿನಿಮಾ ಶೂಟಿಂಗ್‍ಗಳು ನಡೆಯುತ್ತಿರುತ್ತವೆ.

smg jail 1 e1575014912449

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಸಿದ ‘ದಿ-ವಿಲನ್’ ಸಿನಿಮಾದಲ್ಲಿಯೂ ಶಿವಮೊಗ್ಗದ ಈ ನೂತನ ಜೈಲನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಶಿವರಾಜ್ ಕುಮಾರ್ ಸಾಹಸ ದೃಶ್ಯ ಇದೇ ಜೈಲಿನಲ್ಲಿ ಶೂಟಿಂಗ್ ನಡೆಸಲಾಗಿತ್ತು.

ವಿಜಯ್ ಅವರ ದಳಪತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ. ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿ, ವಿಜಯ್ ಆ್ಯಂಡ್ ಟೀಂ ಈಗ ಶಿವಮೊಗ್ಗದ ಕಡೆ ಹೊರಟ್ಟಿದ್ದಾರೆ. ಶಿವಮೊಗ್ಗದ ಜೈಲಿನ ಸುತ್ತಮುತ್ತ ದಳಪತಿ-64 ಚಿತ್ರದ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದೆ.

smg jail 2 e1575014970280

ದಳಪತಿ-64 ಸಿನಿಮಾ ಚಿತ್ರೀಕರಣಕ್ಕಾಗಿ, ಡಿಸೆಂಬರ್ 1ರಿಂದ ಜನವರಿ 18ರ ವರೆಗೆ ಅನುಮತಿ ನೀಡಿದ್ದು ವಿಜಯ್ ಜೊತೆ ವಿಜಯ್ ಸೇತುಪತಿ ಕೂಡ ಈ ಚಿತ್ರೀಕರಣದಲ್ಲಿ ಕಾಣಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *