ತಮಿಳಿನ ಸ್ಟಾರ್ ಸಹೋದರರಾದ ಸೂರ್ಯ (Suriya) ಮತ್ತು ಕಾರ್ತಿ (Karthi) ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಇಬ್ಬರು ಎದುರಾಳಿಗಳಾಗುತ್ತಿದ್ದಾರೆ. ‘ಕಂಗುವ’ (Kanguva Film) ಚಿತ್ರಕ್ಕೆ ಕಾರ್ತಿ ಎಂಟ್ರಿ ಕೊಟ್ಟಿದ್ದಾರೆ.
ಬಹುಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಕಂಗುವ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಣ್ಣ ಸೂರ್ಯನ ಮುಂದೆ ಕಾರ್ತಿ ವಿಲನ್ ಆಗಿ ಘರ್ಜಿಸಲಿದ್ದಾರೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ:‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್
ಇದು ಒಂದೇ ಅಲ್ಲ, ಇದರ ಜೊತೆ ಮತ್ತೊಂದು ಸಿನಿಮಾದ ಮಾತುಕತೆ ಕೂಡ ಆಗಿದೆ. ಅದರಲ್ಲಿ ಕಾರ್ತಿಗೆ ಸೂರ್ಯ ವಿಲನ್ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
‘ಕಂಗುವ’ ಚಿತ್ರವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸೂರ್ಯಗೆ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಬಾಬಿ ಡಿಯೋಲ್ ಈ ಸಿನಿಮಾದ ಭಾಗವಾಗಿದ್ದಾರೆ. ಅಕ್ಟೋಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ.