40 ಜೀವಂತ ಗುಂಡುಗಳ ಸಮೇತ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟ ಕರುಣಾಸ್

Public TV
1 Min Read
KARUNAS

ಮಿಳು ನಟ ಕಮ್ ಮಾಜಿ ಶಾಸಕ ಕರುಣಾಸ್ (Actor Karunas) ಬ್ಯಾಗ್‌ನಲ್ಲಿ 40 ಜೀವಂತ ಗುಂಡುಗಳು ಪತ್ತೆಯಾಗಿವೆ. ಇತ್ತೀಚೆಗೆ ಚೆನ್ನೈ ಏರ್‌ಪೋರ್ಟ್‌ನಲ್ಲಿ 40 ಜೀವಂತ ಗುಂಡುಗಳ ಸಮೇತ ನಟ ಕರುಣಾಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

KARUNAS

ಜೂನ್ 2ರ ಬೆಳಗ್ಗೆ ತಿರುಚ್ಚಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಶಾಸಕ ಕರುಣಾಸ್‌ರನ್ನು ಭದ್ರತಾ ಪಡೆಗಳು ತಪಾಸಣೆ ನಡೆಸಿದಾಗ ಅವರ ಬ್ಯಾಗ್‌ನಲ್ಲಿ 40 ಬುಲೆಟ್‌ಗಳು ಪತ್ತೆಯಾಗಿವೆ. ಈ ಕಾರಣಕ್ಕಾಗಿ ಅವರ ಪ್ರಯಾಣ ರದ್ದು ಮಾಡಿ ಕರುಣಾಸ್‌ರನ್ನು ಪೊಲೀಸರು ವಶಕ್ಕೆ ಪಡೆದರು.

ತನಿಖೆಯ ವೇಳೆ ಮಿಸ್ ಆಗಿ ಬುಲೆಟ್ ಇರುವ ಬ್ಯಾಗ್ ಅನ್ನು ಕರುಣಾಸ್ ತಂದಿರೋದು ತಿಳಿದು ಬಂದಿದೆ. ತಮ್ಮ ರಕ್ಷಣೆಗಾಗಿ ಲೆಸೆನ್ಸ್ ಸಹಿತ ಮಾರಕಾಸ್ತ್ರ ಹೊಂದಿರುದಾಗಿ ವಿಚಾರಣೆ ವೇಳೆ ನಟ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಅವರು ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ತಮ್ಮ ಬಂದೂಕನ್ನು ಪೊಲೀಸ್ ಠಾಣೆಗೆ ನಟ ಒಪ್ಪಿಸಿದ್ದಾರೆ.

Share This Article