ಕಾಲಿವುಡ್ (Kollywood) ನಟ ಬಿಜಿಲಿ ರಮೇಶ್ (Bijili Ramesh) ಅವರು ಇಂದು (ಆ.27) ವಿಧಿವಶರಾಗಿದ್ದಾರೆ. ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
https://youtu.be/gzqRV1vTths?si=t9HQyt0mwaeyUFvq
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜಿಲಿ ರಮೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಮತ್ತೆ ಬಾಲಿವುಡ್‌ಗೆ ಕಮ್‌ಬ್ಯಾಕ್ ಆಗ್ತಾರಾ ಪ್ರಿಯಾಂಕಾ ಚೋಪ್ರಾ- ಇನ್ಸ್ಟಾದಲ್ಲಿ ಕೊಟ್ಟ ಹಿಂಟ್ ಏನು?
ಅಂದಹಾಗೆ, ಸಿನಿಮಾದಲ್ಲಿ ಪೋಷಕ ಪಾತ್ರಗಳು ಮತ್ತು ಯೂಟ್ಯೂಬ್‌ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಫೇಮಸ್ ಆಗಿದ್ದ ಬಿಜಿಲಿ ರಮೇಶ್ ಅವರು ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದ ಲಿವರ್‌ಗೆ ಸಂಬಂಧಿಸಿದ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಆರ್ಥಿಕವಾಗಿಯೂ ನಟ ಸಂಕಷ್ಟದಲ್ಲಿದ್ದರು.

