ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಜೊತೆ ತ್ರಿಷಾ (Trisha) ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ದಂಪತಿಗಳಾಗಿ ಅಜಿತ್ ಕುಮಾರ್ ಮತ್ತು ತ್ರಿಷಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ‘ವಿದಾ ಮುಯಾರ್ಚಿ’ (Vidaa Muyarchi) ಚಿತ್ರದ ಹೊಸ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ
ಸಾಕಷ್ಟು ದಿನಗಳಿಂದ ಅಜಿತ್ ಕುಮಾರ್ ಹೊಸ ಸಿನಿಮಾದಲ್ಲಿ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಅಜಿತ್ ಮತ್ತು ತ್ರಿಷಾ ಜೊತೆಯಾಗಿರುವ ಪೋಸ್ಟರ್‌ವೊಂದು ಹಂಚಿಕೊಂಡು ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿದೆ.
View this post on Instagram
ಹಸಿರು ಬಣ್ಣದ ಧಿರಿಸಿನಲ್ಲಿ ನಟಿ ಮಿಂಚಿದ್ರೆ, ಕಪ್ಪು ಬಣ್ಣದ ಉಡುಗೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ‘ವಿದಾ ಮುಯಾರ್ಚಿ’ ಸಿನಿಮಾದಲ್ಲಿ ಇಬ್ಬರೂ ದಂಪತಿಗಳಾಗಿ ನಟಿಸಿದ್ದಾರೆ. ಸದ್ಯ ಈ ಪೋಸ್ಟರ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಈ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡಿದೆ.
ಇನ್ನೂ ತ್ರಿಷಾ ಕೃಷ್ಣನ್‌ಗೆ ಚಿತ್ರರಂಗದಲ್ಲಿ ಈಗ ಬೇಡಿಕೆ ಹೆಚ್ಚಾಗಿದೆ. ಸ್ಟಾರ್ ಸಿನಿಮಾಗಳಲ್ಲಿ ನಟಿಸಲು ತ್ರಿಷಾಗೆ ನಿರ್ಮಾಪಕರು ಮಣೆ ಹಾಕ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ.