`ಕೆಜಿಎಫ್’ ಯಶ್ ಜೊತೆ `ಜೋಕೆ’ ಹಾಡಿಗೆ ಸೊಂಟ ಬಳುಕಿಸಲು ನಟಿ ಆಯ್ಕೆ

Public TV
1 Min Read
KGF NEW LOOK 2

ಬೆಂಗಳೂರು: ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದ ಐಟಂ ಹಾಡೊಂದಕ್ಕೆ ಯಶ್ ಜೊತೆ ಹೆಜ್ಜೆ ಹಾಕಲು ನಟಿಯ ಹುಡುಕಾಟ ನಡೆಯುತ್ತಿತ್ತು. ಈಗ ಕೊನೆಗೂ ನಟಿ ಆಯ್ಕೆಯಾಗಿದ್ದಾರೆ.

ಕೆಜಿಎಫ್ ನಲ್ಲಿ ಯಶ್ ಜೊತೆ ಡ್ಯಾನ್ಸ್ ಮಾಡಲು ಬಾಲಿವುಡ್ ಬೆಡಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸ್ವತಃ ಕೆಜಿಎಫ್ ನಿರ್ದೇಶಕರೆ ಟ್ವೀಟ್ ಮಾಡಿ ಸ್ಪಷ್ಟ ಪಡಿಸಿದ್ದಾರೆ. ಅನೇಕ ದಿನಗಳಿಂದ ಐಟಂ ಹಾಡಿಗೆ ನೃತ್ಯ ಮಾಡಲು ನಟಿಯರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಈ ಹಿಂದೆ ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ, ತಮನ್ನಾ ಹಾಗೂ ನೊರಾ ಫತೇಹಿ ನಟಿಯರಲ್ಲಿ ಒಬ್ಬರು ಯಶ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಈಗ ಇವರಲ್ಲಿ ತಮನ್ನಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.

Yash KGF 5

ಕೆಜಿಎಫ್ ಸಿನಿಮಾದಲ್ಲಿ ಹಳೆಯ ಹಾಡು `ಜೋಕೆ ನಾನು ಬಳ್ಳಿಯ ಮಿಂಚು’ ಸಾಂಗಿಗೆ ತಮನ್ನಾ ಸೊಂಟ ಬಳುಕಿಸಲಿದ್ದಾರೆ. 1970 ರಲ್ಲಿ ಬಿಡುಗಡೆಯಾದ `ಪರೋಪಕಾರಿ’ ಸಿನಿಮಾದಲ್ಲಿ ಈ ಹಾಡು ಇದೆ. ಈ ಹಾಡು ಇಂದಿಗೂ ಟ್ರೆಂಡ್ ಆಗಿದೆ. ಈ ಹಾಡನ್ನು ಕೆಜಿಎಫ್ ಸಿನಿಮಾದಲ್ಲಿ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಈ ಹಾಡಿಗೆ ಯಶ್ ಮತ್ತು ತಮನ್ನಾ ಜೊತೆಯಾಗಿ ಡ್ಯಾನ್ಸ್ ಮಾಡಲಿದ್ದಾರೆ.

ತಮನ್ನಾ ಈ ಹಿಂದೆ ನಟ ನಿಖಿಲ್‍ ಕುಮಾರ್ ಅಭಿನಯದ `ಜಾಗ್ವಾರ್’ ಸಿನಿಮಾದಲ್ಲಿ ಹಾಡಿನಲ್ಲಿ ಅಭಿನಯಿಸಿದ್ದರು. ಈಗ ಯಶ್ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *