ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾದಲ್ಲಿ ನಟಿ ತಮನ್ನಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಾವಾಲ ಹಾಡಿಗೆ ಸೆಕ್ಸಿ ಸ್ಟೆಪ್ (Sexy Step) ಹಾಕಿದ್ದಾರೆ. ಕರ್ಲಿ ಹೇರ್ ಸ್ಟೈಲ್ ನಲ್ಲಿ ಬ್ಯೂಟಿಫುಲ್ ಆಗಿ ಕಂಡಿದ್ದಾರೆ. ಹಾಗಾಗಿ ತಮನ್ನಾ ಅಭಿಮಾನಿಗಳು ಅವರನ್ನು ಹಾಲಿವುಡ್ ನ ಖ್ಯಾತ ಪಾಪ್ ಗಾಯಕಿ ಶಕೀರಾಗೆ (Shakira)ಹೋಲಿಕೆ ಮಾಡುತ್ತಿದ್ದಾರೆ. ಥೇಟ್ ನೀವು ಆ ಹಾಡಿನಲ್ಲಿ ಶಕೀರಾ ರೀತಿಯಲ್ಲೇ ಕಾಣುತ್ತೀರಿ ಎಂದು ಹೋಲಿಕೆ ಮಾಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಈ ಹಾಡಿಗೆ ಲಕ್ಷಾಂತರ ಜನರು ಹುಕ್ ಸ್ಟೆಪ್ (Hook Step) ಹಾಕಿದ್ದಾರೆ. ಭಾರತದಾದ್ಯಂತ ಈ ಹಾಡಿಗೆ ಕುಣಿದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡುತ್ತಿದ್ದಾರೆ. ಅಲ್ಲದೇ ತಮನ್ನಾ ಅವರು ಅನುಕರಣೆ ಮಾಡಿದಂತೆ ಸಾವಿರಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಬೋಲ್ಡ್ ಪಾತ್ರಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ನಟಿ ತಮನ್ನಾ ಜೈಲರ್ (Jailer) ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರೆ. ಜೈಲರ್ ಸಿನಿಮಾದ ಕಾವಾಲ ಹಾಡಿನಲ್ಲಿ ನಟಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ತಮನ್ನಾ (Tamannaah) ಮೈಮಾಟಕ್ಕೆ ಅಭಿಮಾನಿಗಳು ಸುಸ್ತಾಗಿದ್ದಾರೆ. ಇದನ್ನೂ ಓದಿ:‘ರಂಗಬಲಿ’ ಸಕ್ಸಸ್ ಮೀಟ್ನಿಂದ ನಾಗ ಶೌರ್ಯ ವಾಕ್ ಔಟ್
ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊನ್ನೆಯಷ್ಟೇ ಈ ಸಿನಿಮಾದ ಡಬ್ಬಿಂಗ್ ಕಾರ್ಯದಲ್ಲೂ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು (Song) ಚಿತ್ರತಂಡ ರಿಲೀಸ್ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಡನ್ನು ಅಭಿಮಾನಿಗಳು ಸವಿದಿದ್ದಾರೆ.
ಜೈಲರ್ ಸಿನಿಮಾದ ಹಾಡು ಯಾವಾಗ ಎಂದು ರಜನಿಕಾಂತ್ ಅಭಿಮಾನಿಗಳು ಕೇಳುತ್ತಿದ್ದರು. ಬೇಗ ಹಾಡು ರಿಲೀಸ್ ಮಾಡಿ ಎನ್ನುವುದು ಅವರ ಆಗ್ರಹ ಕೂಡ ಆಗಿತ್ತು. ಕೊನೆಗೂ ಚಿತ್ರತಂಡ ಅಭಿಮಾನಿಗಳ ಧ್ವನಿಗೆ ಸ್ಪಂದಿಸಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಸಿದೆ.
Web Stories