ಬೆಂಗಳೂರು: ‘ಕೆಜಿಎಫ್’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ 4 ನಿಮಿಷ ಹೆಜ್ಜೆ ಹಾಕಲು ಮಿಲ್ಕಿ ಬ್ಯೂಟಿ ತಮನ್ನಾ 40 ಲಕ್ಷ ಸಂಭಾವನೆ ಪಡೆದಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ತಮನ್ನಾ ರಾಕಿಂಗ್ ಸ್ಟಾರ್ ಜೊತೆ ಹಳೆಯ ಹಾಡು `ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಚಿತ್ರದಲ್ಲಿ ಈ ಹಾಡು ನಾಲ್ಕು ನಿಮಿಷಗಳಿದೆ. ಈ ನಾಲ್ಕು ನಿಮಿಷದ ಹಾಡಿಗೆ ತಮನ್ನಾ ಬರೋಬ್ಬರಿ 40 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
Advertisement
ಡಾ. ರಾಜ್ಕುಮಾರ್ ಅಭಿನಯಿಸಿದ 1970ರಲ್ಲಿ ಬಿಡುಗಡೆಯಾದ `ಪರೋಪಕಾರಿ’ ಸಿನಿಮಾದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು ಇದೆ. ಈ ಹಾಡು ಇಂದಿಗೂ ಟ್ರೆಂಡ್ ಆಗಿದ್ದು, ಕೆಜಿಎಫ್ ಸಿನಿಮಾದಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಇದನ್ನೂ ಓದಿ: ಯಶ್ ಜೊತೆ ಡ್ಯಾನ್ಸ್ ಮಾಡಿ ರಾಕಿಂಗ್ ಸ್ಟಾರ್ ಬಗ್ಗೆ ತಮನ್ನಾ ಟ್ವೀಟ್!
Advertisement
Advertisement
ತಮನ್ನಾ ಈ ಹಿಂದೆ ನಟ ನಿಖಿಲ್ ಕುಮಾರ್ ಅಭಿನಯದ `ಜಾಗ್ವಾರ್’ ಸಿನಿಮಾದ ಹಾಡಿನಲ್ಲಿ ಅಭಿನಯಿಸಿದ್ದರು. ಈಗ ಯಶ್ ಜೊತೆ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಮಿಂಚಲಿದ್ದಾರೆ.
Advertisement
ಸದ್ಯ ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv