ಡೇಟಿಂಗ್ ಮಾಡುತ್ತಿದ್ದ ನಟಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ನಟ ವಿಜಯ್ ವರ್ಮಾ (Vijay Varma) ಸಂಬಂಧದಲ್ಲಿ ಈಗ ಬಿರುಕು ಮೂಡಿದೆ. ಇಬ್ಬರು ಈಗ ಬ್ರೇಕಪ್ (Love Breakup) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರೀತಿಯಲ್ಲಿರುವ ಇವರು ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಬರುತ್ತಿತ್ತು. ಆದರೆ ಈಗ ಇಬ್ಬರು ಸಂಬಂಧವನ್ನು ಕಡಿತಗೊಳಿಸಿದ್ದಾರೆ.
Advertisement
ಕೆಲ ವಾರದ ಹಿಂದೆ ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಡಿದೆ. ಇಬ್ಬರ ಸಂಬಧವನ್ನು ಕೊನೆಗೊಳಿಸಿದ್ದರೂ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪರಸ್ಪರ ಗೌರವ ಹೊಂದಿದ್ದಾರೆ. ಇಬ್ಬರೂ ಸ್ನೇಹಿತರಾಗಿ ಉಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
Advertisement
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಸಂಬಂಧವು 2023 ರಲ್ಲಿ ಜೊತೆಯಾಗಿ ನಟಿಸಿದ ಲಸ್ಟ್ ಸ್ಟೋರೀಸ್ 2 ಬಿಡುಗಡೆಯಾದಾಗ ಸಾರ್ವಜನಿಕವಾಗಿ ಬಹಿರಂಗವಾಗಿತ್ತು. ಇದನ್ನೂ ಓದಿ: ‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಲಿದ್ಯಾ?: ಸುಳಿವು ಕೊಟ್ಟ ಮ್ಯೂಸಿಕ್ ಡೈರೆಕ್ಟರ್
ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.
ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ತಮನ್ನಾ ಭಿನ್ನ ಪ್ರತಿಕ್ರಿಯೆ ನೀಡಿದ್ದರು. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು.
ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ವಿಜಯ್ ವರ್ಮಾ ಅವರ ಭೇಟಿಯಾಯಿತು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.