ಮಿಲ್ಕಿ ಬ್ಯೂಟಿ ತಮನ್ನಾ ಸ್ನೇಹಿತೆಯ ಬರ್ತ್‍ಡೇಯಲ್ಲಿ ಮಸ್ತ್ ಮಜಾ..!

Public TV
1 Min Read
Tamannaah Bhatia

ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಸ್ನೇಹಿತೆ ಹಾಗೂ ಬಾಲಿವುಡ್ (Bollywood) ನಟಿ ನಿರ್ಮಾಪಕಿ ಪ್ರಗ್ಯಾ ಕಪೂರ್ ಬರ್ತ್‍ಡೇಯನ್ನ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ. ಬರ್ತ್‍ಡೇ ಪಾರ್ಟಿಯಲ್ಲಿ ಕಳೆದ ಕ್ಷಣಗಳನ್ನು, ತಮ್ಮ ಹಳೆಯ ನೆನಪುಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Tamannaah Bhatia 1

ವೀಕೆಂಡ್‍ಗೂ ಸ್ನೇಹಿತೆಯ ಬರ್ತ್‍ಡೇಗೂ ಹೇಳಿ ಮಾಡಿಸಿದಂತಾಗಿದೆ. ಹೀಗಾಗಿ ಈ ವೀಕೆಂಡ್ ತಮ್ಮ ಸ್ನೇಹಿತೆಯರ ಜೊತೆ ಮಿಲ್ಕಿ ಬ್ಯೂಟಿ ಮಸ್ತ್ ಮಜಾ ಮಾಡಿದ್ದಾರೆ. ಪ್ರಗ್ಯಾ ಕಪೂರ್ ಸೇರಿ ಹಲವರು ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಹಳೆಯ ನೆನಪುಗಳನ್ನೆಲ್ಲ ಕೆದಕಿ ಒಂದೆರಡು ಸ್ಟೆಪ್ ಜೋರಾಗಿಯೇ ಹಾಕಿದ್ದಾರೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

ತಮನ್ನಾ ನಟನೆಯ ರೇಡ್-2 ಹಾಗೂ ಒಡೇಲಾ ಪಾರ್ಟ್-2 ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಅವರ ಕೈಯಲ್ಲಿ ಸದ್ಯ ಮೂರು ಬಾಲಿವುಡ್ ಸಿನಿಮಾಗಳಿವೆ. ರೇಂಜರ್, ವ್ಯಾನ್ ಹಾಗೂ ಇನ್ನೂ ಹೆಸರಿಡದ ನಿರ್ದೇಶಕ ರೋಹಿತ್ ಶೆಟ್ಟಿಯ ಸಿನಿಮಾಗಳ ಆಫರ್ ತಮನ್ನಾ ಕೈಯಲ್ಲಿವೆ. ಸದ್ಯ ಬಾಲಿವುಡ್‍ನಲ್ಲೇ ಅವರು ಮನೆ ಮಾಡಿಕೊಂಡಿದ್ದಾರೆ.‌

2026ರಲ್ಲಿ ಮಿಲ್ಕಿ ಬ್ಯೂಟಿಯ ಲೈನಪ್‍ನಲ್ಲಿ ಮೂರು ಸಿನಿಮಾಗಳಿದ್ದು, ಬಹುತೇಕ ಬಾಲಿವುಡ್‍ನಲ್ಲಿ ತಮನ್ನಾ ಸೆಟ್ಲ್ ಆಗಿದ್ದಾರೆ. ಟಾಲಿವುಡ್ ಕಡೆ ಈ ವರ್ಷವೂ ಅಲ್ಲ, ಮುಂದಿನ ವರ್ಷವೂ ಮುಖ ಮಾಡೋದು ಡೌಟ್ ಎನ್ನಲಾಗ್ತಿದೆ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

Share This Article