ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ (Mysore Sandal Soap) ತೆಲುಗು ನಟಿ ತಮನ್ನಾ ಭಾಟಿಯಾ (Tamannaah Bhatia) ರಾಯಭಾರಿಯಾಗಿದ್ದಾರೆ. ನಟಿಗೆ ಕರ್ನಾಟಕ ಸರ್ಕಾರ ಕೋಟಿ ಕೋಟಿ ಹಣ ಕೊಟ್ಟಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕೃತ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ನೇಮಕಗೊಂಡಿದ್ದಾರೆ. 2 ವರ್ಷ 2 ದಿನದ ಅವಧಿಗೆ ರಾಯಭಾರಿಯಾಗಲು ನಟಿ ಬರೋಬ್ಬರಿ 6.20 ಕೋಟಿ ಸಂಭಾವನೆ ಪಡೆದಿದ್ದಾರೆ. ಇದನ್ನೂ ಓದಿ: ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್
ಈ ಸಂಬಂಧ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ನೇಮಕ ಮಾಡಿಕೊಳ್ಳಲಾಗಿದೆ.