ಸೌತ್ ಸುಂದರಿ ತಮನ್ನಾ ಭಾಟಿಯಾಗೆ (Tamannaah Bhatia) ಐಟಂ ಹಾಡೇನು ಹೊಸದಲ್ಲ. ಇದೀಗ ಮತ್ತೊಂದು ಐಟಂ ಹಾಡಿನಲ್ಲಿ ಸೆಕ್ಸಿಯಾಗಿ ಹೆಜ್ಜೆ ಹಾಕುವ ಮೂಲಕ ಪಡ್ಡೆಹುಡುಗರ ನಶೆ ಏರಿಸಿದ್ದಾರೆ. ‘ರೇಡ್ 2’ (Raid 2) ಸಿನಿಮಾದಲ್ಲಿ ಅವರು ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ
‘ರೇಡ್ 2’ ಸಿನಿಮಾದಲ್ಲಿ ನಶಾ ಸಾಂಗ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ರಾಜ್‌ಕುಮಾರ್ ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ರಿತೇಶ್ ದೇಶ್‌ಮುಖ್ ಹಾಗೂ ವಾಣಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ನಟಿಯ ಹಾಡು ರಿಲೀಸ್ ಆಗಿದ್ದು, ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದೆ. ಇದನ್ನೂ ಓದಿ:ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ
View this post on Instagram
ಅಜಯ್ ದೇವಗನ್ ನಟನೆಯ ‘ರೇಡ್ 2’ ಸಿನಿಮಾ ಇದೇ ಮೇ 1ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. 2018ರಲ್ಲಿ ‘ರೇಡ್’ ಸಿನಿಮಾ ರಿಲೀಸ್ ಆಗಿತ್ತು. ಅದರ ಸೀಕ್ವೆಲ್ ಚಿತ್ರ ಇದಾಗಿದೆ.